ವರ್ಣಾಂಧತೆ ಹೊಂದಿರುವರು ವೈದ್ಯರಾಗಬಹುದೇ?: ಎಂಸಿಐಗೆ ಸುಪ್ರೀಂ ಪ್ರಶ್ನೆ
Update: 2017-07-31 22:45 IST
ಹೊಸದಿಲ್ಲಿ,ಜು.31: ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ರ‍್ಯಾಂಕ್ಗಳನ್ನು ಪಡೆದಿರುವ,ಆದರೆ ವರ್ಣಾಂಧತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡಬಹುದೇ ಎನ್ನುವುದನ್ನು ತಿಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಭಾರತೀಯ ವೈದ್ಯಕೀಯ ಮಂಡಳಿಗೆ ಸೂಚಿಸಿದೆ.
ವರ್ಣಾಂಧತೆ ಹೊಂದಿರುವ ವಿದ್ಯಾರ್ಥಿಗಳು ವೈದ್ಯರಾಗುವುದನ್ನು ನಿಷೇಧಿಸಿರುವ ದಶಕಗಳ ನಿಯಮವನ್ನು ರದ್ದುಗೊಳಿಸಬೇಕು ಮತ್ತು ಬಣ್ಣಗುರುಡುತನವನ್ನು ಆಧರಿಸಿರುವ ಈ ತಾರತಮ್ಯ ಮುಂದುವರಿಯಕೂಡದು ಎಂದು ಸವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿದ್ದ ಸಮಿತಿಯು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಗಳಾದ ದೀಪಕ ಮಿಶ್ರಾ ಮ್ತು ಎ.ಎಂ.ಖನ್ವಿಲ್ಕರ್ ಅವರ ಪೀಠವು ಈ ನಿರ್ದೇಶವನ್ನು ನೀಡಿದೆ.
ಈ ಬಗ್ಗೆ ಮುಂದಿನ ವಿಚಾರಣೆ ಸೆ.12ರಂದು ನಡೆಯಲಿದೆ.