×
Ad

ಇಬ್ಬರು ಮನೆ ಕಳವು ಆರೋಪಿಗಳ ಬಂಧನ: ಸೊತ್ತು ವಶ

Update: 2017-07-31 22:54 IST

ಉಡುಪಿ, ಜು.31: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ರಾಡಿ ಮತ್ತು ಸೀತಾನದಿ ಎಂಬಲ್ಲಿ ಮನೆಗೆ ನುಗ್ಗಿ ಸೊತ್ತುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ರಾಜೇಂದ್ರನಗರದ ಅರುಣ್ ಕುಮಾರ್ ಯಾನೆ ಕಿರಣ್(28) ಹಾಗೂ ಹುಬ್ಬಳ್ಳಿ ಐಟಿಐ ಕಾಲೇಜು ಬಳಿಯ ಅಮರೇಶ್(28) ಎಂಬವರು ಬಂಧಿತರು. ಇವರಿಂದ ಕಳವು ಮಾಡಿದ್ದ ಎರಡು ಚಿನ್ನದ ಸರ, ಕೃತ್ಯಕ್ಕೆ ಬಳಸಿದ ಬೈಕ್, ಸ್ಕ್ರೂಡ್ರೈವರ್ ಮತ್ತು ಕಬ್ಬಿಣದ ರಾಡನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಇವುಗಳ ಒಟ್ಟು ಮೌಲ್ಯ 99,000ರೂ. ಅಂದಾಜಿಸಲಾಗಿದೆ.
ಇವರಿಬ್ಬರು ಸೇರಿ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಹರಿಹರಪುರ, ಹೊನ್ನಾವರ, ಗದಗ, ಸವದತ್ತಿ, ರೋಣ, ನರಗಲ್ ಮುಂತಾದ ಕಡೆಗಳಲ್ಲಿ ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಇವರಿಬ್ಬರೂ ಹಲವು ಕಳವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಅರುಣ್ ಕುಮಾರ್ ವಿರುದ್ಧ ಮೈಸೂರು, ರಾಣಿಬೆನ್ನೂರು, ತೀರ್ಥಹಳ್ಳಿ, ಶಿರಸಿ ಮತ್ತು ಮಂಡ್ಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಲ್ಲಿ ದಾಖಲಾಗಿದ್ದು, ಆತ ನ್ಯಾಯಾಲಯಕ್ಕೆ ಹಾಜ ರಾಗದೆ ತಲೆಮರೆಸಿಕೊಂಡಿದ್ದನು. ಆತನ ವಿರುದ್ಧ ಪ್ರಸ್ತುತ ದಸ್ತಗಿರಿ ವಾರೆಂಟ್ ಜಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಹೆಬ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನ ದಲ್ಲಿ ಕಾರ್ಕಳ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಎಸ್.ಜೆ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಡಿಸಿಐಬಿ ಎಎಸ್ಸೈಗಳಾದ ರೊಸಾರಿಯೋ ಡಿಸೋಜ, ರವಿಚಂದ್ರ ಹಾಗೂ ಸಿಬ್ಬಂದಿಗಳಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜು ಕುಮಾರ್, ದಯಾನಂದ ಪ್ರಭು, ಶಿವಾನಂದ, ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News