×
Ad

ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷರಾಗಿ ಮೊಯಿನುದ್ದೀನ್ ಕಮರ್ ಆಯ್ಕೆ

Update: 2017-07-31 23:10 IST
ಮೊಯಿನುದ್ದೀನ್ ಕಮರ್, ಅರಫಾ ಮಂಚಿ

ಮಂಗಳೂರು, ಜು. 31: ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ಇದರ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮೊಯಿನುದ್ದೀನ್ ಕಮರ್ ಆಯ್ಕೆಯಾಗಿದ್ದಾರೆ. ಮಂಗಳೂರಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ರಾಜ್ಯ ಕಾರ್ಯದರ್ಶಿ ತಾಹೆರ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಮೊಯಿನುದ್ದೀನ್ ಕಮರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ಅರಫಾ ಮಂಚಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ಇದರ ರಾಜ್ಯ ಕಾರ್ಯದರ್ಶಿ ತಾಹೆರ್ ಹುಸೇನ್ ಮಾತಾಡಿ, ಪಕ್ಷದ ಮೌಲ್ಯಾಧಾರಿತ ಚಿಂತನೆ, ರಾಜಕೀಯರಂಗದಲ್ಲಿ ಅದರ ಅಗತ್ಯವನ್ನು ವಿವರಿಸಿದರು. ನಿರ್ಗಮನ ಜಿಲ್ಲಾಧ್ಯಕ್ಷ ಝಾಹಿದ್ ಹುಸೈನ್‌ರವರು ಮಾತಾಡಿ ಪಕ್ಷದಲ್ಲಿ ಈವರೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಚುನಾಯಿತ ಜಿಲ್ಲಾಧ್ಯಕ್ಷ ಮೊಯಿನ್ ಕಮರ್ ಮಾತಾಡಿ ಪಕ್ಷದ ಜಿಲ್ಲಾ ಘಟಕ ಮುಂದೆ ನಿರ್ವಹಿಸಬೇಕಾದ ಕೆಲಸಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ನಿರ್ಗಮನ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಸರ್ಫ್ರಾರ್ ಅಹ್ಮದ್ ವಂದಿಸಿದರು. ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ. ಶ್ರೀಕಾಂತ್ ಸಾಲಿಯಾನ್, ಜಿಲ್ಲಾನಾಯಕರಾದ ಯೂಸುಫ್ ಪಕ್ಕಲಡ್ಕ, ಸುಲೈಮಾನ್ ಕಲ್ಲರ್ಪೆ, ಐತಪ್ಪ ಸಾಲ್ಮರ, ಮನ್ಸೂರ್ ಕಲ್ಲಾಪು, ನಿಸಾರ್, ಮುತ್ತಲಿಬ್ ತಾಜ್, ಬಿಎಫ್ ಅಬ್ದುರ್ರಹ್ಮಾನ್, ಅಶ್ರಫ್ ಕಲ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News