ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಅದನಿಗೆ ಸುಪ್ರೀಂಕೋರ್ಟ್ ಅನುಮತಿ

Update: 2017-07-31 17:43 GMT

ಹೊಸದಿಲ್ಲಿ, ಜು. 31: ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮಅದನಿಗೆ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.

 ಆಗಸ್ಟ್ 7ರಿಂದ 14ರ ವರೆಗೆ ಮಅದನಿ ತನ್ನ ತಾಯ್ನಡಾದ ಕೇರಳದಲ್ಲಿ ಇರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ, ಮಅದನಿ ಭದ್ರತಾ ವೆಚ್ಚ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆಗಸ್ಟ್ 9ರಂದು ತಲಶ್ಶೇರಿಯಲ್ಲಿ ನಡೆಯಲಿರುವ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿ ಎನ್‌ಐಎ ನ್ಯಾಯಾಲಯ ಜುಲೈ 24ರಂದು ನೀಡಿದ ತೀರ್ಪು ಪ್ರಶ್ನಿಸಿ ಮಅದನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

   ಆಗಸ್ಟ್ 1ರಿಂದ 7ರ ವರೆಗೆ ಅನಾರೋಗ್ಯದ ತಾಯಿಯನ್ನು ಭೇಟಿಯಾಗಲು ಹಾಗೂ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ತೆರಳಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿತ್ತು ಎಂದು ಮಅದನಿ ವಕೀಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News