ಸೂಟ್‌ಕೇಸ್‌ನಲ್ಲಿ ರುಂಡವಿಲ್ಲದ ಯುವತಿಯ ಶವ ಪತ್ತೆ

Update: 2017-08-01 10:41 GMT

ಮುಂಬೈ,ಆ.1: ನವಿ ಮುಂಬೈನ ಪಾಮ್ ಬೀಚ್ ರಸ್ತೆ ಬಳಿಯ ತೋಟದ ಮನೆಯೊಂದರಲ್ಲಿ ಸೂಟ್‌ಕೇಸ್‌ನಲ್ಲಿ ತುರುಕಿದ್ದ ರುಂಡವಿಲ್ಲದ ಯವತಿಯ ಶವ ಪತ್ತೆಯಾಗಿದೆ. ಯುವತಿಯ ಶವವನ್ನು ಅತ್ಯಂತ ವಿರೂಪಗೊಳಿಸಲಾಗಿದ್ದು, ಅದನ್ನು ಸೂಟ್‌ಕೇಸ್‌ನಲ್ಲಿ ತುಂಬಲು ರುಂಡವನ್ನು ತುಂಡರಿಸಿರುವಂತಿದೆ ಎಂದು ಪೊಲೀಸರು ಹೇಳಿದ್ದಾರೆ. ಮೇಲ್ನೋಟಕ್ಕೆ ಲಭ್ಯ ಸಾಕ್ಷಾಧಾರಗಳಂತೆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಿರುವ ಪೊಲೀಸರು ಆಕೆಯ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಸೋಮವಾರ ಬೆಳಿಗ್ಗೆ ತನ್ನ ತೋಟದಲ್ಲಿ ಸುತ್ತು ಹಾಕುತ್ತಿದ್ದ ಮಹೇಂದ್ರ ತಾಂಡೇಲ್ ಕಣ್ಣಿಗೆ ಈ ಸೂಟ್‌ಕೇಸ್ ಬಿದ್ದಿತ್ತು. ಅದರಲ್ಲೇನಿದೆ ಎನ್ನುವುದು ಗೊತ್ತಾಗದೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಂಪೂರ್ಣ ಬಟ್ಟೆಗಳನ್ನು ಧರಿಸಿದ್ದ ಯುವತಿಯ ಶವವನ್ನು ಸೂಟ್‌ಕೇಸ್‌ನಲ್ಲಿಡಲು ಅನುಕೂಲವಾಗುವಂತೆ ಕೈಕಾಲುಗಳನ್ನು ಮುರಿಯಲಾಗಿತ್ತು. ಆದರೆ ರುಂಡ ನಾಪತ್ತೆಯಾ ಗಿತ್ತು. ಪ್ರದೇಶವನ್ನು ನಿರ್ಬಂಧಿಸಿ ಇಡೀ ತೋಟವನ್ನು ಶೋಧಿಸಿದಾಗ ಸೂಟ್‌ಕೇಸ್ ಬಿದ್ದಲ್ಲಿಂದ ಕೆಲವು ನೂರು ಮೀ.ಅಂತರದಲ್ಲಿ ರುಂಡ ಪತ್ತೆಯಾಗಿದೆ ಎಂದು ಎನ್‌ಆರ್‌ಐ ಕೋಸ್ಟಲ್ ಪೊಲೀಸ್ ಠಾಣಾಧಿಕಾದರಿಗಳು ತಿಳಿಸಿದರು.

ಯುವತಿಯು ಸಮೀಪದಲ್ಲಿಯೇ ಎಲ್ಲೋ ಕೆಲಸ ಮಾಡುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆಕೆ ತನ್ನ ಮೊಬೈಲ್ ಫೋನ್‌ನಿಂದ ಕೊನೆಯ ಕರೆಯನ್ನು ರವಿವಾರ ರಾತ್ರಿ 11 ಗಂಟೆಯ ಸುಮಾರಿಗೆ ವಾಶಿಯ ಯಾರಿಗೋ ಮಾಡಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ತನಿಖಾಧಿಕಾರಿಗಳು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News