×
Ad

6ನೆ ವೇತನ ಆಯೋಗ ಜಾರಿಗೊಳಿಸಲು ಮನವಿ

Update: 2017-08-01 18:01 IST

ಮಂಗಳೂರು, ಆ.1: ನಗರದ ಉರ್ವಸ್ಟೋರ್‌ನ ತುಳುಭವನ ಸಭಾಂಗಣದಲ್ಲಿ ಜರಗಿದ ರಕ್ತದಾನ, ಆರೋಗ್ಯ-ತಪಾಸಣೆ, ನೇತ್ರ-ತಪಾಸಣೆ, ದಂತ-ತಪಾಸಣೆ, ಆಯುಷ್ ಚಿಕಿತ್ಸೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರಿಗೆ ರಾಜ್ಯ ಸರಕಾರವು 6ನೆ ವೇತನ ಆಯೋಗವನ್ನು ಜಾರಿಗೊಳಿಸಬೇಕು ಎಂದು ಸರಕಾರಿ ನೌಕರರ ಸಂಘವು ಮನವಿ ಸಲ್ಲಿಸಿದೆ.

 ಸಂಘದ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಸ್ವಾಗತಿಸಿದರು. ಸುರೇಂದ್ರರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಅಶೋಕನಗರ ಚರ್ಚ್‌ನ ಧರ್ಮಗುರು ಫಾ.ಎಕ್ವಿನ್ ನೊರಾನ್ಹ್, ರೆಡ್‌ಕ್ರಾಸ್ ಅಧ್ಯಕ್ಷ ಡಾ. ಸುಶೀಲ್ ಜತ್ತನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಎಂ., ವೆನ್ಲಾಕ್ ಆಸ್ಪತ್ರೆಯ ಡಾ. ರಾಜೇಶ್ವರಿ ದೇವಿ ಹೆಚ್, ಜಿಲ್ಲಾ ವೆನ್ಲಾಕ್ ಲೇಡಿಗೋಶನ್ ಆಸ್ಪತ್ರೆಯ ಡಾ. ಸವಿತಾ, ಜಿಲ್ಲಾ ರಕ್ತ ಪೂರಣ ಕೇಂದ್ರದ ಡಾ. ಶರತ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಜಿಲ್ಲಾ ಅಂಧತ್ವ ಮತ್ತು ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ರತ್ನಾಕರ್ , ಕಾರ್ಪೊರೇಟರ್ ರಾಧಕೃಷ್ಣ ಮೇಯರ್ ಕವಿತಾ ಸನಿಲ್, ಸಂಘದ ರಾಜ್ಯಾಧ್ಯಕ್ಷ ಪ್ರಕಾಶ್ ನಾಯಕ್ ಸಂಘದ ವಜ್ರ ಮಹೋತ್ಸವದ ಸಂಚಾಲಕ ರಮೇಶ್ ಕಿರೋಡಿಯನ್, ಗೌರವ ಅಧ್ಯಕ್ಷ ವಸಂತ ನಾಯ್ಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸತತ 30 ಬಾರಿ ರಕ್ತದಾನ ಮಾಡಿರುವ ಲಕ್ಷಣ ಗೌಡ, (ವಾಹನ ಚಾಲಕರು, ತಾಲೂಕು ಆರೋಗ್ಯ ಕೇಂದ್ರ ಬಂಟ್ವಾಳ), ಯೋಗಿಶ್, (ವಾಹನ ಚಾಲಕರು, ಮೀನುಗಾರಿಕೆ ಇಲಾಖೆ), ದ.ಕ.ಜಿಪಂ ಸಿಇಒ ಅವರ ಆಪ್ತ ಸಹಾಯಕ ಉದಯ ರವಿ ಅವರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News