×
Ad

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಾಹಿದ್ ಖಾಕನ್ ಅಬ್ಬಾಸಿ ಆಯ್ಕೆ

Update: 2017-08-01 18:48 IST

ಇಸ್ಲಾಮಾಬಾದ್, ಆ.1: ಪಾಕ್ ನ ಮಾಜಿ ತೈಲ ಸಚಿವ ಶಾಹಿದ್ ಖಾಕನ್ ಅಬ್ಬಾಸಿಯವರನ್ನು ಪಾಕಿಸ್ತಾನ ಸಂಸತ್ತು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿದೆ.

ಆಡಳಿತ ಪಿಎಂಎಲ್-ಎನ್ ಪಕ್ಷದ ಅಬ್ಬಾಸಿಯವರು 342  ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 221 ಮತಗಳನ್ನು ಗಳಿಸಿದರು. ಫಲಿತಾಂಶ ಪ್ರಕಟಿಸಿದ ನಂತರ ಸ್ಪೀಕರ್ ಅಯಾಝ್ ಸಾದಿಕ್ ಅವರು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವಂತೆ ಹಾಗೂ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಂತೆ ಅಬ್ಬಾಸಿಯವರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News