×
Ad

ನೀರಪಲ್ಕೆ: ಬಾವಿಯೊಳಗೆ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2017-08-01 21:20 IST

ಮೂಡುಬಿದಿರೆ, ಆ.1: ಗರ್ಭಿಣಿಯೊಬ್ಬರು ಬಾವಿಯೊಳಗೆ ಮಗುವಿಗೆ ಜನ್ಮ ನೀಡಿರುವ ಘಟನೆ ಕಡಲಕೆರೆ ಸಮೀಪದ ನೀರಪಲ್ಕೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗು ಮೃತಪಟ್ಟಿದ್ದು, ತಾಯಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಘಟನೆ ನಡೆದು ಈಗಾಗಲೇ 3 ದಿನಗಳಾಗಿದ್ದು, ಮಂಗಳವಾರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಅನೈತಿಕ ಸಂಬಂಧದಿಂದ ಗರ್ಭಿಣಿಯಾದ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ಆಕೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸಂದರ್ಭ ಬಾವಿಯೊಳಗೆ ಮಗುವಿಗೆ ಜನ್ಮ ನೀಡಿದ್ದಾಳೆ.

ಪ್ರಸವ ವೇದನೆಯೊಂದಿಗೆ ಮಹಿಳೆ ನೀರಿರುವ ಬಾವಿಗೆ ಹಾರಿದ್ದು, ಬಾವಿಯೊಳಗಿದ್ದ ಪೈಪ್‌ನ ಸಹಾಯದಿಂದ ಬದುಕುಳಿದಿದ್ದಾರೆ. ಈ ವೇಳೆ ಬಾವಿಯೊಳಗೆ ಹೆರಿಗೆಯಾಗಿದೆ. ನಂತರ ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಆಕೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News