ಆಧಾರ್-ಡ್ರೈವಿಂಗ್ ಲೈಸೆನ್ಸ್ ಜೋಡಣೆ ಕಡ್ಡಾಯ ?

Update: 2017-08-01 16:03 GMT

ಹೊಸದಿಲ್ಲಿ, ಆ. 1: ತೆರಿಗೆ ಸಲ್ಲಿಕೆಗೆ ಆಧಾರ್ ಕಡ್ಡಾಯಗೊಳಿಸಿದ ಬಳಿಕ ಕೇಂದ್ರ ಸರಕಾರ ಡೈವಿಂಗ್ ಪರವಾನಿಗೆಗೆ ಆಧಾರ ಕಡ್ಡಾಯ ಗೊಳಿಸಲು ಚಿಂತನೆ ನಡೆಸುತ್ತಿದೆ. ಹಲವು ಚಾಲನಾ ಪರವಾನಿಗೆ ಪಡೆಯುವುದು, ತಪ್ಪು ಗುರುತನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರಕಾರ ಈ ನಡೆ ಇರಿಸಿದೆ. ಆಧಾರ್ ಜೋಡಣೆ ಇದುವರೆಗೆ 57 ಸಾವಿರ ಕೋಟಿ ರೂಪಾಯಿ ಉಳಿಸಲು ಸರಕಾರಕ್ಕೆ ಸಹಕಾರಿಯಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಈ ನಡುವೆ, ಆಗಸ್ಟ್ 31ರ ಒಳಗೆ ಆಧಾರನೊಂದಿಗೆ ಜೋಡಿಸದೇ ಇದ್ದರೆ ಪಾನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News