ಕುಸ್ತಿ ಪಂದ್ಯಾಟ: ಮೂಳೂರು ಅಲ್‌ಇಹ್ಸಾನ್‌ಗೆ ಪ್ರಶಸ್ತಿ
Update: 2017-08-01 21:53 IST
ಕಾಪು, ಆ.1: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ವಲಯದ ವತಿಯಿಂದ ಓಂತಿಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ 14ರ ವಯೋಮಿತಿಯ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನ ಸಂಸ್ಥೆಯಾಗಿರುವ ಮೂಳೂರಿನ ಅಲ್-ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಪ್ರಶಸ್ತಿ ಗೆದ್ದು ಕೊಂಡಿದೆ
ಶಾಲಾ ವಿದ್ಯಾರ್ಥಿಗಳಾದ ರೆಹಾನ್, ನಯೀಂ, ಸಹಲ್, ಸೈಯದ್, ಶಫೀಕ್, ಅಫ್ರೀದ್, ಯೂನುಸ್ ಪ್ರಥಮ ಸ್ಥಾನ ಹಾಗೂ ಮುಝಮ್ಮಿಲ್ ಶಹೀಂ, ಅನ್ವೀಝ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಶಾಲಾ ಪ್ರಾಂಶುಪಾಲ ಕೆ.ಎಸ್.ಹಬೀಬುರ್ರಹ್ಮಾನ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಜಯಪ್ರಸನ್ನ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾ ಯಿನಿ ಪ್ರಮೀಳಾ, ದೈಹಿಕ ಶಿಕ್ಷಣ ಶಿಕ್ಷಕ ಬಶೀರ್ ಎಂ ಮೂರುಗೋಳಿ, ದೈಹಿಕ ಶಿಕ್ಷಣ ಶಿಕ್ಷಕಿ ಸೌಮ್ಯ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.