ಉ.ಕಾ.ಸುಬ್ಬರಾಯ ಆಚಾರ್ಯ ಸಂಸ್ಮರಣೆ ಕಾರ್ಯಕ್ರಮ
ಉಡುಪಿ, ಆ.1: ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜಸೇವಾ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲಕ ಹಾಗೂ ಎನ್ನೆಸ್ಸೆಸ್ ನಿರ್ದೇಶಕರಾಗಿದ್ದ ಉ.ಕಾ.ಸುಬ್ಬರಾಯ ಆಚಾರ್ಯರ ಸಂಸ್ಮರಣಾ ಕಾರ್ಯ ಕ್ರಮವು ಇತ್ತೀಚೆಗೆ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ ವಹಿಸಿದ್ದರು. ಮೂಡಬಿದಿರೆಯ ಅಧ್ಯಾಪಕ ಕುಂಜೂರು ಗಣೇಶ ಆಚಾರ್ಯ ಸಂಸ್ಮರಣಾ ದತ್ತಿ ಉಪನ್ಯಾಸ ನೀಡಿದರು. ಉ.ಕಾ ಸುಬ್ಬರಾಯ ಆಚಾರ್ಯರ ಜೀವನ ಮತ್ತು ಸಾಧನೆಗಳನ್ನು ಬಿ.ಎ.ಆಚಾರ್ಯ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯ ಲಕ್ಷ್ಮಣ ಆಚಾರ್ಯರನ್ನು ಸನ್ಮಾನಿಸಲಾಯಿತು.
ದಾಮೋದರ ಎಲ್.ಆಚಾರ್ಯ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಯೋಗೀಶ ಆಚಾರ್ಯ ಪೆರಂಪಳ್ಳಿ ವಂದಿಸಿದರು. ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೂಡುಬಿದಿರೆಯ ವಿಶ್ವಕರ್ಮ ಸಂಸ್ಕೃತಿ ಪ್ರಚಾರ ಪ್ರತಿಷ್ಠಾನದಿಂದ ಅಮರಶಿಲ್ಪಿ ಜಕಣಾಚಾರ್ಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.