×
Ad

10 ದಿನ ಕೆಲಸ ಮಾಡಿದ ಸಂಪರ್ಕ ನಿರ್ದೇಶಕನನ್ನು ವಜಾ ಗೊಳಿಸಿದ ಟ್ರಂಪ್

Update: 2017-08-01 21:57 IST

ವಾಶಿಂಗ್ಟನ್, ಆ. 1: ಕೇವಲ ಹತ್ತು ದಿನಗಳ ಕಾಲ ಕೆಲಸ ಮಾಡಿರುವ ತನ್ನ ಸಂಪರ್ಕ ನಿರ್ದೇಶಕ ಅಂತೋನಿ ಸ್ಕಾರಮಕ್ಸಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವಜಾಗೊಳಿಸಿದ್ದಾರೆ.

ಶ್ವೇತಭವನದ ನೂತನ ಸಿಬ್ಬಂದಿ ಮುಖ್ಯಸ್ಥ ಮಾಜಿ ಮರೀನ್ ಜನರಲ್ ಜಾನ್ ಕೆಲ್ಲಿಯ ಸೂಚನೆಯಂತೆ ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಶ್ವೇತಭವನದಲ್ಲಿನ ಒಳಜಗಳವನ್ನು ನಿವಾರಿಸಲು ಜಾನ್ ಕೆಲ್ಲಿ ತನ್ನ ಸೇನಾ ಅನುಭವವನ್ನು ಬಳಸುತ್ತಾರೆ ಎನ್ನಲಾಗಿದೆ.

ತಾನು ಸಿಬ್ಬಂದಿ ಮುಖ್ಯಸ್ಥರಿಗೆ ವರದಿ ಒಪ್ಪಿಸುವುದಿಲ್ಲ, ನೇರವಾಗಿ ಅಧ್ಯಕ್ಷರಿಗೆ ಒಪ್ಪಿಸುತ್ತೇನೆ ಎಂಬುದಾಗಿ ಸ್ಕಾರಮಕ್ಸಿ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News