×
Ad

ಆ.20: ಕುಂದಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

Update: 2017-08-01 21:59 IST

ಕುಂದಾಪುರ, ಆ.1: ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆ. 20ರಂದು ರವಿವಾರ ಕುಂದಾಪುರದ ಗಾಂಧಿ ಮೈದಾನದಲ್ಲಿ ಪೂರ್ವಾಹ್ನ ಆರಂಭಗೊಳ್ಳಲಿದೆ.

ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪುರುಷರಿಗೆ ಅಥ್ಲೆಟಿಕ್ ಸ್ಪರ್ಧೆಗಳಾದ 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ. ಓಟ ಅಲ್ಲದೇ ಉದ್ದ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 100ಮೀ ರಿಲೇ, 400ಮೀ. ರಿಲೇ ಹಾಗೂ ಗುಂಪು ಆಟಗಳಾದ ವಾಲಿಬಾಲ್, ಖೋ ಖೋ, ಕಬಡ್ಡಿ, ಪುಟ್‌ಬಾಲ್, ಬಾಲ್‌ಬ್ಯಾಡ್ಮಿಂಟನ್, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ.

ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪುರುಷರಿಗೆ ಅಥ್ಲೆಟಿಕ್  ಸ್ಪರ್ಧೆಗಳಾದ 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ. ಓಟ ಅಲ್ಲದೇ ಉದ್ದಜಿಗಿತ, ಎತ್ತರಜಿಗಿತ, ಗುಂಡೆಸೆತ, ಟ್ರಿಪಲ್‌ಜಂಪ್, ಜಾವೆಲಿನ್‌ಥ್ರೋ, ಡಿಸ್ಕಸ್‌ಥ್ರೋ, 100ಮೀರಿಲೇ, 400ಮೀ.ರಿಲೇ ಹಾಗೂ ಗುಂಪುಆಟಗಳಾದ ವಾಲಿಬಾಲ್, ಖೋಖೋ, ಕಬಡ್ಡಿ, ಪುಟ್‌ಬಾಲ್, ಬಾಲ್‌ಬ್ಯಾಡ್ಮಿಂಟನ್, ಥ್ರೋಬಾಲ್‌ ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರಿಗಾಗಿ 100ಮೀ, 200ಮೀ, 400ಮೀ, 800 ಮೀ, 1500ಮೀ, 3000ಮೀ ಓಟಗಳಲ್ಲದೇ ಉದ್ದ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 100ಮೀ ರಿಲೇ, 400ಮೀ ರಿಲೇ ಹಾಗೂ ಗುಂಪು ಆಟಗಳಾದ ವಾಲಿಬಾಲ್, ಖೋ ಖೋ, ಕಬ್ಬಡಿ, ಬಾಲ್‌ಬ್ಯಾಡ್ಮಿಂಟನ್, ತ್ರೋ ಸ್ಪರ್ಧೆಗಳು ನಡೆಯಲಿವೆ.

ಆ.12ರಂದು ಶನಿವಾರ ಪುಟ್‌ಬಾಲ್ ಸ್ಪರ್ಧೆಯು ತೆಕ್ಕಟ್ಟೆ ವಿಶ್ವವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಅಪರಾಹ್ನ 2 ಗಂಟೆಗೆ ಆರಂಭ ಗೊಳ್ಳಲಿದೆ. ಆ.19ರಂದು ಶನಿವಾರ ಪೂರ್ವಾಹ್ನ 9 ಗಂಟೆಯಿಂದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟವು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕುಂದಾಪುರ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ಕುಸುಮಾಕರ ಶೆಟ್ಟಿ ಆಲೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್: 9611819350 ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News