×
Ad

ಆ.2: ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ

Update: 2017-08-01 22:09 IST

ಉಡುಪಿ, ಆ.1: ಇಂಜಿನಿಯರ್ಸ್‌ ಇಂಡಿಯಾ ಲಿಮಿಟೆಡ್, ಅಲಿಮ್ಕ್ ಬೆಂಗಳೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಜಿಲ್ಲಾಡಳಿತ ಉಡುಪಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ (ಡಿಡಿಆರ್‌ಸಿ) ಉಡುಪಿ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ಈಗಾಗಲೇ ಶಿಬಿರಗಳ ಮೂಲಕ ಆಯ್ಕೆ ಮಾಡಲಾಗಿರುವ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ನೀಡುವ ಸಮಾರಂಭವನ್ನು  ಆ.2 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಲಿದೆ.

 ಈ ಸಮಾರಂದಲ್ಲಿ ಒಟ್ಟು 371 ಫಲಾನುಭವಿಗಳಿಗೆ ವಿವಿಧ ರೀತಿಯ (ಮೋಟರೈಸ್‌ಡ್ ವೀಲ್‌ಚೇರ್, ಬ್ಯಾಟರಿ ಚಾಲಿತ ಟ್ರೈಸೈಕಲ್, ಗಾಲಿಕುರ್ಚಿ, ಶ್ರವಣಸಾದನ, ಎಂಆರ್‌ಕಿಟ್, ವಾಕಿಂಗ್ ಸ್ಟಿಕ್, ವಾಕರ್, ರೊಲೇಟರ್, ಸ್ಮಾರ್ಟ್‌ಕೇನ್, ಸೆಲ್‌ಪೋನ್ ಇತ್ಯಾದಿ) ಒಟ್ಟು ಸುಮಾರು 40.00 ಲಕ್ಷ ರೂ. ಗಳ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.

ಈ ಸಮಾರಂದಲ್ಲಿ ಒಟ್ಟು 371 ಫಲಾನುವಿಗಳಿಗೆ ವಿವಿಧ ರೀತಿಯ (ಮೋಟರೈಸ್‌ಡ್ ವೀಲ್‌ಚೇರ್, ಬ್ಯಾಟರಿ ಚಾಲಿತ ಟ್ರೆಸೈಕಲ್, ಗಾಲಿಕುರ್ಚಿ, ಶ್ರವಣಸಾದನ, ಎಂಆರ್‌ಕಿಟ್, ವಾಕಿಂಗ್‌ಸ್ಟಿಕ್, ವಾಕರ್, ರೊಲೇಟರ್, ಸ್ಮಾರ್ಟ್‌ಕೇನ್, ಸೆಲ್‌ಪೋನ್‌ ಇತ್ಯಾದಿ) ಒಟ್ಟು ಸುಮಾರು 40.00 ಲಕ್ಷ ರೂ. ಗಳ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.

ಸಮಾರಂಭವನ್ನು ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತೀಯ ರೆಡ್‌ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಭಾಗಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News