ತೆಂಗಿನಮರದಿಂದ ಬಿದ್ದು ಮೃತ್ಯು
Update: 2017-08-01 22:34 IST
ಕುಂದಾಪುರ, ಆ.1: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮಣ ಪೂಜಾರಿ (55) ಎಂದು ಗುರುತಿಸಲಾಗಿದೆ. ಇವರು ಹೆಮ್ಮಾಡಿ ಗ್ರಾಮದ ಕೋಟೆಬೆಟ್ಟು ಎಂಬಲ್ಲಿರುವ ತನ್ನ ತೋಟದಲ್ಲಿ ತೆಂಗಿನ ಕಾಯಿ ತೆಗೆಯಲು ಮರ ಹತ್ತಿದ್ದು, ಈ ವೇಳೆ ಆಕಸ್ಮಿಕವಾಗಿ 40 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.