×
Ad

​ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-08-01 22:35 IST

ಕೋಟ, ಆ.1: ಸಾಸ್ತಾನ ಸಂಬೋಡ್ಲು ನಿವಾಸಿ ಬಸವ ಪೂಜಾರಿ ಎಂಬವರ ಪುತ್ರ ಸುರೇಶ ಪೂಜಾರಿ(34) ಎಂಬವರು ಆ.1ರಂದು ಬೆಳಗ್ಗೆ ಪಾರಂಪಳ್ಳಿ ಗ್ರಾಮದ ತೋಡುಕಟ್ಟಿನ ಯೋಗೀಶ್ ಎಂಬವರ ಚಟ್ಲಿಕೆರೆಯ ಶೆಡ್‌ನ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ: ವೈಯಕ್ತಿಕ ಕಾರಣದಿಂದ ಮನನೊಂದ ವರಂಗ ಗ್ರಾಮದ ಬಾಡಿಗೆ ಮನೆ ನಿವಾಸಿ ಮಹಾಬಲ ಮೂಲ್ಯ ಎಂಬವರ ಪತ್ನಿ ರತಿ(48) ಎಂಬವರು  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News