ತಂತ್ರಜ್ಞಾನ ಅಭಿವೃದ್ಧಿಯಾದಾಗ ಎಂಎಚ್370 ವಿಮಾನ ಪತ್ತೆ

Update: 2017-08-01 17:07 GMT

ಸಿಡ್ನಿ, ಆ. 1: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾದಾಗ ನಾಪತ್ತೆಯಾಗಿರುವ ಮಲೇಶ್ಯದ ಎಂಎಚ್370 ವಿಮಾನವು ಪತ್ತೆಯಾಗುತ್ತದೆ ಎಂದು ಮಲೇಶ್ಯ ಏರ್‌ಲೈನ್ಸ್‌ನ ಮುಖ್ಯಾಧಿಕಾರಿ ಪೀಟರ್ ಬೆಲೆವ್ ‘ದಿ ಆಸ್ಟ್ರೇಲಿಯನ್’ ಪತ್ರಿಕೆಗೆ ಹೇಳಿದ್ದಾರೆ.

‘‘ವಿಜ್ಞಾನವು ಅಭಿವೃದ್ಧಿ ಹೊಂದುತ್ತದೆ, ಆಗ ಅವಶೇಷಗಳು ಇರುವ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ’’ ಎಂದರು.

2014 ಮಾರ್ಚ್ 8ರಂದು 239 ಜನರನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಬೋಯಿಂಗ್ 777 ವಿಮಾನವು ನಾಪತ್ತೆಯಾಗಿದೆ. ದಕ್ಷಿಣ ಹಿಂದೂ ಮಹಾಸಾಗರದಲ್ಲಿ ನಡೆಸಲಾದ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ವಿಮಾನದ ಯಾವುದೇ ಅವಶೇಷ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News