×
Ad

ಅಕ್ರಮ ಜಾನುವಾರು ಸಾಗಾಟ : ಐವರು ಆರೋಪಿಗಳ ಬಂಧನ, 18 ಜಾನುವಾರು ವಶಕ್ಕೆ

Update: 2017-08-02 19:56 IST

ಮುಂಡಗೋಡ(ಯಲ್ಲಾಪುರ),ಆ.2: ಅಕ್ರಮವಾಗಿ ಜಾನವಾರುಗಳನ್ನು ಸಾಗಿಸುತ್ತಿದ್ದ ಮೂರು ಪ್ರತ್ಯೇಕ ಘಟನೆಗಳಲ್ಲಿ ಪೊಲೀಸರು ವಾಹನಗಳ ಸಮೇತ 18 ಜಾನವಾರುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ಪ್ರಕರಣಗಳ ಆರೋಪಿಗಳಾದ ಕಲಘಟಗಿಯ ಸಂಕಟಿಕೊಪ್ಪದ ಶ್ರೀಕಾಂತ ಹರಿಜನ ಅಂಕೋಲಾದ ಶಿರಗುಂಜಿಯ ಬೊಮ್ಮಯ್ಯ ನಾಯಕ, ಅಂಕೋಲಾದ ಹೊಸ್ಕೇರಿ ವಿವಾಸಿ ರಾಘವೇಂದ್ರ ನಾಯಕ, ಅಂಕೋಲಾದ ಹೊಸ್ಕೇರಿ ನಿವಾಸಿ ಸುರೇಶ ನಾಯಕ, ಅಂಕೋಲಾ ಕಣಿಗಲ್‍ನ ಪ್ರಶಾಂತ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ.

ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಜಾನುವಾರು ವಾಹನಗಳ ಮೊತ್ತ ಸುಮಾರು 6 ಲಕ್ಷ ರೂ. ಒಟ್ಟು ಸುಮಾರು 7.50 ಲಕ್ಷ ರೂ. ಸೊತ್ತನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್ ಉಪನಿರೀಕ್ಷಕ ಶ್ರೀಧರ ಎಸ್.ಆರ್ ನೇತೃತ್ವದಲ್ಲಿ  ಪ್ರೋಬಶನರಿ ಪಿಎಸ್‍ಆಯ್ ನವೀನ್ ನಾಯ್ಕ, ಎಎಸ್‍ಆಯ್‍ಗಳಾದ ಚವ್ಹಾಣ, ಎಲ್.ಪಿ ಶೇಣವಿ, ಸಿಬ್ಬಂದಿಗಳಾದ ನಾಗಪ್ಪ ಲಾಣಿ, ಚಿದಾನಂದ ನಾಯ್ಕ ದ್ಯಾಮಟ್ಟಿ ಹೊಮ್ ಗಾರ್ಡ್ ಪ್ರಭಾಕರ ಸಿದ್ದಿ ಮುಂತಾದವರು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News