×
Ad

ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಪೌರರಕ್ಷಣೆ ಕುರಿತು ತರಬೇತಿ

Update: 2017-08-02 20:23 IST

ಮಂಗಳೂರು, ಆ. 2: ಆಳ್ವಾಸ್ ಎಂಜಿನಿಯರಿಂಗ್ ಟೆಕ್ನಾಲಜಿ ಮಿಜಾರು ಮೂಡಬಿದಿರೆಯಲ್ಲಿ ಏರ್‌ಫೋರ್ಸ್ ಎನ್‌ಸಿಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು.

 ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ರಮೇಶ್ ತರಬೇತಿ ನೀಡಿದರು. ತರಬೇತಿಯಲ್ಲಿ ವಿವಿಧ ಶಾಲೆಗಳಿಂದ ಸುಮಾರು 570 ಮಂದಿ ಎನ್.ಎನ್.ಸಿ. ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ತರಬೇತಿಯನ್ನು ನೀಡಲಾಯಿತು. ಈ ಶಿಬಿರದಲ್ಲಿ ಕ್ಯಾಂಪ್ ಕಮಾಂಡೆಂಟ್ ಮತ್ತು ವಿಂಗ್ ಕಮಾಂಡೆಂಟ್ ಪಿ.ಸಿ.ಪಂತ್ ಅವರು ಹಾಗೂ ಸೌರಬ್ ಕುಮಾರ್, ಎ.ಕೆ.ತಿವಾರಿ, ಸುನಿಲ್ ಲೋಬೋ, ಕೇಶ್ ಕುಮಾರ್ ಜೈನ್, ಸನತ್ ಆಳ್ವ ಮತ್ತು ಉಪಸ್ಥಿತರಿದ್ದರು.

ಪಿ.ಕೆ.ಶಾಹ ಸ್ವಾಗತಿಸಿದರು.ರಾಯನ್ ಮಾರ್ಟಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News