×
Ad

ಶ್ರೀಗಂಧ ಅಕ್ರಮ ಸಾಗಾಟಕ್ಕೆ ಯತ್ನ : ಅರಣ್ಯಾಧಿಕಾರಿಗಳ ಕಾರ್ಯಾಚರಣೆ

Update: 2017-08-02 20:33 IST

ಮಂಗಳೂರು, ಆ. 2: ಶ್ರೀಗಂಧವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ನಗರದ ಕಸಬಾ ಗ್ರಾಮದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಅಕ್ರಮ ಶ್ರೀ ಗಂಧ ಕೊರಡುಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಮಂಗಳೂರು ವಲಯ ಅರಣ್ಯ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.

 ಈ ಸಂಬಂಧ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೇರಮೊಗರು ಗಾಂಧಿನಗರ ನಿವಾಸಿ ಉಸ್ಮಾನ್ ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ 32 ಶ್ರೀ ಗಂಧದ ಕೊರಡುಗಳು ಮತ್ತು ಚೆಕ್ಕೆ ಸೇರಿ 12.900 ಕೆ.ಜಿ. ಶ್ರೀ ಗಂಧ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆ.14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

  ಕಾರ್ಯಾಚರಣೆಯನ್ನು ಮಂಗಳೂರು ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ವರ ಎಂ. ಮತ್ತುಅರಣ್ಯ ರಕ್ಷಕ ನವೀನ್ ಕುಮಾರ್ ಮತ್ತು ಅರಣ್ಯ ವೀಕ್ಷಕ ಶಿವಪ್ರಸಾದ್ ಎಲ್. ಹಾಗೂ ಅರಣ್ಯ ಸಂಚಾರಿ ದಳದ ಪ್ರಭಾರ ಉಪ ನಿರೀಕ್ಷಕ ಜಗನಾಥ ಶೆಟ್ಟಿ, ಮುಖ್ಯ ಪೇದೆ ಪ್ರವೀಣ್, ಮತ್ತು ಪೇದೆಗಳಾದ ಉದಯನಾಯಕ್, ಮಹೇಶ್, ದೇವರಾಜ್ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News