ಸಾಲಿಗ್ರಾಮ: ಸಾಂಕ್ರಾಮಿಕ ರೋಗ ಬಗ್ಗೆ ಜನಜಾಗೃತಿ ಶಿಬಿರ
ಉಡುಪಿ, ಆ.2: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಹೊರ ವಲಯ ಪ್ರಾಂಗಣದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್, ಪಾಂಚಜನ್ಯ ಸಂಘ ಪಾರಂಪಳ್ಳಿ - ಹಂದಟ್ಟು, ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಕಡ -ಸಾಲಿಗ್ರಾಮ, ಶ್ರೀಗುರುನರಸಿಂಹ ದೇವಸ್ಥಾನ ಮತ್ತು ಸ.ಹಿ.ಪ್ರಾ. ಶಾಲೆ ಚಿತ್ರಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಂಕ್ರಾಮಿಕ ರೋಗಗಳು- ಜನಜಾಗೃತಿ ಶಿಬಿರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮಣೂರು-ಪಡುಕೆರೆ ಗೀತಾ ಫೌಂಡೇಶನ್‌ನ ಅಧ್ಯಕ್ಷ ಆನಂದ ಕುಂದರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗುರುಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಾಂಚಜನ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಪಟ್ಟಣ ಪಂಚಾಯತ್‌ನ ಉಪಾಧ್ಯಕ್ಷ ಉದಯ ಪೂಜಾರಿ, ಮುಖ್ಯಾಧಿಕಾರಿ ಆರ್. ಶ್ರೀಪಾದ್ ಪುರೋಹಿತ್ ಉಪಸ್ಥಿತರಿದ್ದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ ರಾವ್ ಇವರು ಸಾಂಕಾಮ್ರಿಕ ರೋಗಗಳು, ಅವುಗಳ ಹರಡುವಿಕೆ ಹಾಗೂ ನಿಯಂತ್ರಣದ ಕುರಿತು ಮಾತನಾಡಿದರು. ಡೆಂಗ್, ಮಲೇರಿಯಾ, ಮೆದುಳು ಜ್ವರ, ಹಂದಿ ಜ್ವರ, ಕಾಲರಾ, ಸಿಡುಬು, ಪ್ಲೇಗ್ ಇತ್ಯಾದಿ ರೋಗಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್‌ನ ಆರೋಗ್ಯ ಸಹಾಯಕಿ ಮಮತಾ ಮಂಜುನಾಥ, ಚಿತ್ರಪಾಡಿ ಶಾಲೆಯ ಮುಖ್ಯೊಪಾಧ್ಯಾಯಿನಿ ಜ್ಯೋತಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣ ಆಚಾರ್ ಉಪಸ್ಥಿತರಿದ್ದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಚಂದ್ರಶೇಖರ ಸೋಮಯಾಜಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.