×
Ad

ರಸ್ತೆ ಅಪಘಾತ : ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Update: 2017-08-02 20:59 IST

ಭಟ್ಕಳ,ಆ.02: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಕಾಯ್ಕಿಣಿ ತೆರ್ನಮಕ್ಕಿ ಚರ್ಚ್ ಎದುರಿನ ರಾ.ಹೆ.ಯಲ್ಲಿ ಜರಗಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಶಿರಾಲಿಯ ಕೋಟೆನಾಗಿಲು ನಿವಾಸಿ ಬೈಕ್ ಸವಾರ ಚಂದ್ರಶೇಖರ ಚೌಡು ನಾಯ್ಕ ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಇನ್ನೊಂದು ಬೈಕಿನಲ್ಲಿದ್ದ ಸರ್ಪನಕಟ್ಟೆ ಸನಿಹದ ಬಿಟ್ಟಿಬೀಳುರಿನ ಮಹೇಶ ಮಂಜುನಾಥ ನಾಯ್ಕ ಹಾಗೂ ಅನಂತ ಸುಕ್ರ ನಾಯ್ಕ ಎಂದು ಗುರುರಿಸಲಾಗಿದ್ದು ಇವರರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.  
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News