ಬೆಳ್ತಂಗಡಿ : ಮಹಿಳಾ ಮತ್ತು ಲಿಂಗ ಸಂವೇದನಾ ಸಮಿತಿಯನ್ನು ಉದ್ಘಾಟನೆ

Update: 2017-08-02 15:54 GMT

ಬೆಳ್ತಂಗಡಿ,ಆ.02 :. ಸಮಾಜದಲ್ಲಿ ಸ್ತ್ರೀಯರು ಹುಟ್ಟಿನಿಂದಲೇ ಕಿರುಕುಳವನ್ನು ಅನುಭವಿಸುತ್ತಾರೆ. ಕಾನೂನಿಗೆ ಅನುಗುಣವಾಗಿ ಮಹಿಳೆಯರು ತಾರತಮ್ಯಗಳನ್ನು ಹೋಗಲಾಡಿಸಬೇಕು. ಹೀಗಾಗಿ ಕಾಲೇಜಿನಲ್ಲಿ ಮಹಿಳಾ ಮತ್ತು ಲಿಂಗ ಸಂವೇದನಾ ಸಮಿತಿ ಅತ್ಯಂತ ಅವಶ್ಯವಾಗಿದೆ ಎಂದು ವಕೀಲೆ ಸ್ವರ್ಣಲತಾ ಹೇಳಿದರು.

ಅವರು ಬೆಳ್ತಂಗಡಿ ಗುರುದೇವ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶಿಪಾರಸ್ಸಿನ ಮೇರೆಗೆ ನಡೆದ ಮಹಿಳಾ ಮತ್ತು ಲಿಂಗ ಸಂವೇದನಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.

ಧೈರ್ಯ ಮತ್ತು ಯಾವುದೇ ವಿಷಯದ ಬಗ್ಗೆ ಅರಿವು ಇದ್ದರೆ ಮಾತ್ರ ಜೀವನದಲ್ಲಿ ಏನನ್ನೂ ಸಾಧಿಸಬಹುದು. ಆದ್ದರಿಂದ ವಿದ್ಯಾರ್ಥಿನಿಯರು ಸಮಸ್ಯೆ ಬಂದಾಗ ಕಾನೂನಿನ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸಬೇಕು. ಸಮಾಜದಲ್ಲಿ ಯಾರ ಹಂಗಿಗೂ ಒಳಗಾಗದೆ ಜೀವನ ರೂಪಿಸಬೇಕು. ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಆರ್ಥಿಕ ನಿರೀಕ್ಷೆ ಇಡದೆ ಸ್ಪಂದಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ ಮಾತನಾಡಿ, ಜನಸಂಖ್ಯೆ ಹೆಚ್ಚಿದಂತೆ ಮಹಿಳೆಯರ ದೌರ್ಜನ್ಯ ಕೂಡ ಹೆಚ್ಚಳವಾಗುತ್ತಿದೆ. ಮಹಿಳೆ ಮತ್ತು ಲಿಂಗ ತಾರತಮ್ಯತೆ, ಬಾಲ್ಯವಿವಾಹ, ಲೈಂಗಿಕ ಶೋಷಣೆ, ಸ್ತ್ರೀ ಭ್ರೂಣಹತ್ಯೆ, ವರದಕ್ಷಣೆ ಕಿರುಕುಳ ಮುಂತಾದ ಶೋಷಣೆ ಸಮಾಜದಲ್ಲಿ ನಿರ್ಮೂಲನವಾಗಬೇಕು. ಭಾರತದಲ್ಲಿ ಶೇ. 92 ಸ್ತ್ರೀಯರು ಪುರುಷರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅದನ್ನು ಹೋಗಲಾಡಿಸಲು ಇಂತಹ ಸಮಿತಿಗಳು ನೆರವಾಗಲಿ ಎಂದರು.

ಕಾಲೇಜಿನ ಉಪನ್ಯಾಸಕಿ ಜಯಶ್ರೀ ಟಿ. ಸ್ವಾಗತಿಸಿದರು. ಉಪನ್ಯಾಸಕಿ ಮಸೂದ ಧನ್ಯವಾದವಿತ್ತರು. ಉಪನ್ಯಾಸಕಿ ಮಲ್ಲಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News