ಬೆಳ್ತಂಗಡಿ : ‘ಆಟಿಡೊಂಜಿ ದಿನ’ ಕಾರ್ಯಕ್ರಮ

Update: 2017-08-02 15:58 GMT

ಬೆಳ್ತಂಗಡಿ,ಆ.02: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಜ್ಞಾನ ವಿಕಾಸ ಸ್ವ ಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ ಬಿ ಬೆಳ್ತಂಗಡಿ ಹಾಗೂ ಊರವರ ಸಹಕಾರದೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ನಡೆಯಿತು.

ಬೆಳ್ತಂಗಡಿ ನ. ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಪರಶುರಾಮನ ಸೃಷ್ಟಿಯ ಈ ತುಳುನಾಡಿನಲ್ಲಿ ಇಂತಹ ಆಟಿಡೊಂಜಿ ದಿನ ಕಾರ್ಯಕ್ರಮ ಪ್ರತಿ ವರ್ಷವೂ ಕೂಡಾ ಇದಕ್ಕಿಂತ ಹೆಚ್ಚಿನ ವಿಜೃಂಭಣೆಯಿಂದ ನಡೆಯಲಿ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಗುರುವಾಯನಕೆರೆಯ ನಿವೃತ್ತ ಮುಖ್ಯ ಶಿಕ್ಷಕಿ ಮೇದಿನಿ ಡಿ. ಗೌಡ ಅವರು ಆಟಿ ತಿಂಗಳಿನ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ನ. ಪಂ. ಸದಸ್ಯರಾದ ರಾಜೇಶ್, ರಮಾದೇವಿ, ವಲಯ ಮೇಲ್ವಿಚಾರಕ ರಾಜೇಶ್ ಪಿ., ಮಧುಸೂದನ್ ಉಪಸ್ಥಿತರಿದ್ದರು.

ಬೆಳ್ತಂಗಡಿ ಬಿ ಒಕ್ಕೂಟದ ಅಧ್ಯಕ್ಷ ದಯಾನಂದ ಕೋಟ್ಯಾನ್ ಸ್ವಾಗತಿಸಿ, ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕಾರ್ಯಕ್ರಮದಂಗವಾಗಿ ಆಟಿ ಕಳೆಂಜ, ಸಂಧಿ ಪಾಡ್ದನ, ಸಾಂಸ್ಕøತಿಕ ವೈಭವ ಇತ್ಯಾದಿ ನಡೆಯಿತು. ಆಟಿ ಆಹಾರೋತ್ಸವದಲ್ಲಿ 59 ಬಗೆಯ ಖಾದ್ಯಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News