ನಾಡದೋಣಿಗಳ ಇಂಜಿನ್ ಕಳವು
Update: 2017-08-02 21:53 IST
ಮಲ್ಪೆ, ಆ.2: ಮಲ್ಪೆಬಂದರಿನ ಟೆಬ್ಮಾ ಶಿಪ್ ಯಾರ್ಡ್ ಸಮೀಪದಲ್ಲಿರುವ ಡಿಸೇಲ್ ಪಂಪ್ ಬಳಿಯ ಧಕ್ಕೆಯಲ್ಲಿ ಲಂಗಾರು ಹಾಕಿದ್ದ ಎರಡು ನಾಡದೋಣಿ ಗಳ ಲಕ್ಷಾಂತರ ರೂ. ವೌಲ್ಯದ ಇಂಜಿನ್‌ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕೋಡಿಬೆಂಗ್ರೆಯ ಮಧು ಬಂಗೇರ ಎಂಬವರ ಪ್ರಾಪ್ತಿ ಹಾಗೂ ನಿಮಿಶ್ ಕುಮಾರ್ ಎಂಬವರ ಜ್ಯೋತಿ ಪ್ರಿಯ ಎಂಬ ನಾಡ ದೋಣಿಯನ್ನು ಜು.26 ರಂದು ಸಂಜೆ ಲಂಗರು ಹಾಕಿಹೋಗಿದ್ದು, ಜು.27ರಂದು ಬೆಳಗಿನ ಜಾವ 5 ಗಂಟೆಗೆ ಬಂದು ನೋಡಿದಾಗ ದೋಣಿಗೆ ಅಳವಡಿಸಿದ ಇಂಜಿನ್‌ಗಳು ಕಳವಾ ಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ 1,50,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.