ಶ್ರೀಕೃಷ್ಣ ಮಠದ ಬಗ್ಗೆ ಫೇಸ್‌ಬುಕ್‌ನಲ್ಲಿ ನಿಂದನೆ: ಪ್ರಕರಣ ದಾಖಲು
ಉಡುಪಿ, ಆ.2: ಉಡುಪಿ ಶ್ರೀಕೃಷ್ಣ ಮಠದ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.29ರಂದು ಬೆಳಗ್ಗೆ 2:41ರ ಸುಮಾರಿಗೆ ಡಾ.ಸಂಪತ್ ಕುಮಾರ್ ಕೋಟೇಶ್ವರ ಎಂಬವರು ಫೇಸ್‌ಬುಕ್‌ನಲ್ಲಿ ಹಣಕ್ಕಾಗಿ ಎರಡೆರಡು ಅಷ್ಟಮಿ ಆಚರಿಸುವ ಉಡುಪಿಯ ಧರ್ಮ ಪಾಖಂಡಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂಬುದಾಗಿ ಫೋಸ್ಟ್ ಹಾಕಿದ್ದು, ಇದಕ್ಕೆ ಶ್ರೀಕೃಷ್ಣ ಮಠದ ಭಕ್ತವೃಂದ ಪ್ರತಿಕ್ರಿಯಿಸಿರುವುದಕ್ಕೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡಿದ್ದಾರೆ.
ಅಲ್ಲದೇ ಡಾ.ಸಂಪತ್ ಕುಮಾರ್‌ರ ಅನುಯಾಯಿಗಳಾದ ಐಶು ಭಟ್, ಐಶ್ವರ್ಯ ಶೆಟ್ಟಿ ಮತ್ತು ಲಕ್ಷ್ಮಿ ಕೆ.ರಾವ್ ಎಂಬವರು ಜು.29ರ ರಾತ್ರಿ 9:12ಕ್ಕೆ ಮತ್ತು ಜು.30ರಂದು ಶ್ರೀಕೃಷ್ಣ ಮಠದ ಬಗ್ಗೆ ಅವಹೇಳನಕಾರಿಯಾಗಿ ಫೇಸ್ ಬುಕ್‌ನಲ್ಲಿ ಪ್ರಚಾರ ಪಡಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಹಯಗ್ರೀವ ಭಕ್ತ ವೃಂದ ಸೋದೆ ಮಠದ ಪದಾಧಿಕಾರಿ ಡಾ.ಯು.ಯೋಗೀಶ್ ಶೇಟ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.