×
Ad

ಆ.5;ಪತ್ತನಾಜೆ ತುಳು ಚಲನಚಿತ್ರ ಧ್ವನಿಸುರುಳಿ ಬಿಡುಗಡೆ

Update: 2017-08-02 22:01 IST

ಮಂಗಳೂರು.ಆ.3:ಪತ್ತನಾಜೆ ತುಳು ಚಲನಚಿತ್ರ ಧ್ವನಿ ಸುರುಳಿಯ ಬಿಡುಗಡೆ ಸಮಾರಂಭ ಆಗಸ್ಟ್ 5ರಂದು ಶನಿವಾರ ಸಂಜೆ 4 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.ಸೆ.1ರಂದು ಚಿತ್ರ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

  ಕಲಾ ಜಗತ್ತು ಕ್ರಿಯೇಶನ್ಸ್ ಅರ್ಪಿಸುವ ಪತ್ತನಾಜೆ ತುಳು ಚಲನಚಿತ್ರ ಮಂಗಳೂರು ಪರಿಸರದ ಮೂಲ್ಕಿ ,ಪಾವಂಜೆ,ಉಡುಪಿ,ಮಂಗಳೂರಿನ ಮೇಗಿನ ಮನೆ,ಸುಲ್ತಾನ್ ಬತ್ತೇರಿ ಮೊದಲಾದ ಕಡೆಗಳಲ್ಲಿ 26 ದಿನಗಳ ಕಾಲ ಚಿತ್ರೀಕರಣ ನಡೆದಿದೆ.ವಿ.ಮನೋಹರ್ ಸಂಗೀತ,ವಿಜಯ ಕುಮಾರ್ ಕೊಡಿಯಾಲ ಬೈಲ್ ಸಂಭಾಷಣೆ,ಸುರೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.ತೋನ್ಸೆ ವಿಜಯ ಕುಮಾರ್ ಶೆಟ್ಟಿ ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ.ತಾರಗಣದಲ್ಲಿ ಸೂರ್ಯರಾವ್,ಶಿವಧ್ವಜ ಶೆಟ್ಟಿ,ರೇಶ್ಮಾ ಶೆಟ್ಟಿ,ಸುಂದರ ರೈ ಮಂದಾರ ಮೊದಲಾದವರು ಒಳಗೊಂಡಿದ್ದಾರೆ.ಸಾಹಿತ್ಯ ಡಾ.ಸುನೀತಾ ಶೆಟ್ಟಿ,ಭಾಸ್ಕರ ರೈ ಕುಕ್ಕುವಳ್ಳಿ,ಕದ್ರಿ ನವನೀತ ಶೆಟ್ಟಿ,ವಿ.ಮನೋಹರ,ವಿಜಯ ಕುಮಾರ್ ಕೊಡಿಯಾಲ ಬೈಲ್,ಡಾ.ದಿನಕರ ಪಚ್ಚನಾಡಿ,ಸತೀಶ್ ಶೆಟ್ಟಿ ಪಟ್ಲ ಮೊದಲಾದವರು ಸಹಕಾರ ನೀಡಿದ್ದಾರೆ ಎಂದು ವಿಜಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News