ಸರ್ವೆ ಎಸ್.ಜಿ.ಎಂ .ಪ್ರೌಢ ಶಾಲೆಯಲ್ಲಿ ಎಂಪವರಿಂಗ್ ಯೂತ್ ಡೇ
ಪುತ್ತೂರು,ಆ.02: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಾಯಕತ್ವ ರೂಪಿಸಿಕೊಳ್ಳುವುದು ಅಗತ್ಯ ಇದಕ್ಕಾಗಿ ದೊರಕಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ವಿದ್ಯಾರ್ಥಿ ಜೀವನ ನಮ್ಮ ಜೀವನದ ಪ್ರಮುಖ ಘಟ್ಟ ಎಂದು ಜೆಸಿಐ ವಲಯ ತರಬೇತುದಾರ ಹರ್ಷಿತ್ ಪಡ್ರೆ ಹೇಳಿದರು.
ಅವರು ಜೆಸಿಐ ಸವಣೂರು ಇದರ ಆಶ್ರಯದಲ್ಲಿ ಮಾಜಿರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯ ಅಂಗವಾಗಿ ಜೆಸಿಐ ವತಿಯಿಂದ ನಡೆದ ಎಂಪವರಿಂಗ್ ಯೂತ್ ಡೇ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮವನ್ನು ಸರ್ವೆ ಎಸ್.ಜಿ.ಎಂ .ಪ್ರೌಢ ಶಾಲಾ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಉದ್ಘಾಟಿಸಿ ,ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಗಳಿಸಲು ತರಬೇತಿಗಳು ಅಗತ್ಯ,ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ತರಬೇತಿ ನೀಡಿ ಅವರನ್ನು ಪರಿಪಕ್ವರನ್ನಾಗಿಸಿ ಭವಿಷ್ಯದ ರೂವಾರಿಗಳಾಗಿ ಬೆಳೆಸುವುದು ಸಂಸ್ಥೆಯ ಉದ್ದೇಶ ಎಂದರು.
ವೇದಿಕೆಯಲ್ಲಿ ಜೆಸಿಐ ಸವಣೂರು ಇದರ ಅಧ್ಯಕ್ಷ ಪ್ರವೀಣ್ ಚೆನ್ನಾವರ ,ಜೆಸಿರೆಟ್ ಅಧ್ಯಕ್ಷೆ ಸವಿತಾ ಪ್ರವೀಣ್ ಕುಂಟ್ಯಾನ ,ಕಾರ್ಯಕ್ರಮ ನಿರ್ದೇಶಕಿ ಚೈತ್ರಾ ಸವಣೂರು ಉಪಸ್ಥಿತರಿದ್ದರು.
ಜೆಸಿಐ ಸವಣೂರು ಇದರ ಕಾರ್ಯದರ್ಶಿ ದಯಾನಂದ ಮೆದು ಸ್ವಾಗತಿಸಿ , ನಿಕಟಪೂರ್ವಾಧ್ಯಕ್ಷ ,ವಲಯ ತರಬೇತುದಾರ ವಸಂತ್ ಎಸ್ ವೀರಮಂಗಲ ವಂದಿಸಿದರು.