ಮಧ್ಯಾಹ್ನ ಊಟದ ಬಳಿಕ ನಿದ್ರಿಸುವುದು ಆರೋಗ್ಯಕರವಲ್ಲ: ಡಾ. ಪಲ್ಲವಿ
ಪುತ್ತೂರು,ಆ.02: ಎಲ್ಲರೂ ಆರೋಗ್ಯ ಕುರಿತು ಜಾಗೃತಿ ಕಾಪಾಡಿಕೊಳ್ಳುವುದು ಅಗತ್ಯ. ಆರೋಗ್ಯ ಸಮಸ್ಯೆಗೆ ಮುಖ್ಯವಾಗಿ ನಾವು ಸ್ವೀಕರಿಸುವ ಆಹಾರ ಪದ್ದತಿ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಹಿತಮಿತವಾದ ಆಹಾರ ಸೇವಿಸಬೇಕು, ಮಧ್ಯಾಹ್ನ ಊಟದ ಬಳಿಕ ನಿದ್ರಿಸುವುದು ಆರೋಗ್ಯಕರವಲ್ಲ ಎಂದು ತಿಂಗಳಾಡಿ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ. ಪಲ್ಲವಿ ತಿಳಿಸಿದರು.
ಅವರು ಮಂಗಳವಾರ ಮಾಡ್ನೂರು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಪುತ್ತೂರಿನ ಕಾವು ಶಿವಸದನ ಸಭಾ ಭವನದಲ್ಲಿ ನಡೆದ `ಹಲೋ ಡಾಕ್ಟರ್' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಹಸಿವು ಕಡಿಮೆ ಇರುತ್ತದೆ. ಆದರೆ ಎಲ್ಲಾ ಹೊತ್ತಿಗೂ ನಿಯಮಿತವಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ನವೋದಯ ಒಕ್ಕೂಟದ ಅಧ್ಯಕ್ಷ ಚಿದಾನಂದ ಆಚಾರ್ಯ, ನವೋದಯ ಟ್ರಸ್ಟ್‍ನ ಮೇಲ್ವಿಚಾರಕ ಚಂದ್ರಶೇಖರ, ಉಪಾಧ್ಯಕ್ಷೆ ನಿರ್ಮಲಾ ರೈ, ಪ್ರೇರಕಿ ಸುಚೇತಾ ರೈ, ಹರಿಣಾಕ್ಷಿ, ಕೇಶವ ಸಸ್ಪೆಟ್ಟಿ ಮತ್ತಿತರರು ಹಾಜರಿದ್ದರು.