ಮಾಡನ್ನೂರು ಇಸ್ಲಾಮಿಕ್ ಆಕಾಡೆಮಿಗೆ ಶಾಸಕಿ ಭೇಟಿ
Update: 2017-08-02 22:13 IST
ಪುತ್ತೂರು,ಆ.02: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಗೆ ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಭೇಟಿ ನೀಡಿದರು. ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕುರಿತು ಶಾಸಕಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಚಟುವಟಿಕೆ ಕುರಿತು ಶಾಸಕಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಅಝೀಜ್ ಬುಶ್ರಾ ಉಚಿತ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೋತ್ತಿಮಾರ್, ನೆಟ್ಟಣಿಗೆ ಮೂಡ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಶಾಲಾ ಪ್ರಾಂಶುಪಾಲ ಹನೀಫ್ ಹುದವಿ, ಆಡಳಿತ ಮಂಡಳಿ ಸಮಿತಿಯ ಸಿ.ಎಚ್. ಅಬ್ದುಲ್ ಅಝೀಝ್, ಎಂ.ಡಿ. ಹಸೈನಾರ್, ಸಿರಾಜುದ್ಧೀನ್ ಪೈಝಿ, ಪ್ರಮುಖರಾದ ವಿಕ್ರಂ ರೈ ಸಾಂತ್ಯ ಹಾಜರಿದ್ದರು.