ಮರ್ದಾಳ ಮಹಿಳೆ ನಾಪತ್ತೆ: ಪ್ರಕರಣ ದಾಖಲು
Update: 2017-08-02 22:23 IST
ಕಡಬ, ಆ.02. 2 ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಅಂಗಡಿಗೆಂದು ತೆರಳಿದ ವಿವಾಹಿತ ಮಹಿಳೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆಂದು ಆಕೆಯ ಪತಿ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಮಹಿಳೆಯನ್ನು ಕುಡಾಲ ನಿವಾಸಿ ಸಿ. ರವಿಚಂದ್ರನ್ ಎಂಬವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ಜು.29ರಂದು ಬೆಳಿಗ್ಗೆ ಮರ್ದಾಳಕ್ಕೆ ಸಾಮಾನು ತರಲೆಂದು ಹೋಗಿದ್ದು, ಮೊಬೈಲ್ ಸ್ವಿಚ್‍ಆಫ್ ಆಗಿದೆ ಎಂದು ನೀಡಿದ ದೂರಿನಂತೆ ಕಡಬ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.