ಸೆ.1ರಿಂದ ಅಮೆರಿಕ ನಾಗರಿಕರಿಗೆ ಉ. ಕೊರಿಯ ಪ್ರಯಾಣ ನಿಷೇಧ
Update: 2017-08-02 22:24 IST
ವಾಶಿಂಗ್ಟನ್, ಆ. 2: ತನ್ನ ಪ್ರಜೆಗಳು ಉತ್ತರ ಕೊರಿಯಕ್ಕೆ ಪ್ರಯಾಣಿಸುವುದನ್ನು ಸೆಪ್ಟಂಬರ್ ಒಂದರಿಂದ ನಿಷೇಧಿಸಲಾಗಿದೆ ಎಂದು ಅಮೆರಿಕ ಬುಧವಾರ ಅಧಿಕೃತವಾಗಿ ತಿಳಿಸಿದೆ.
‘‘ಅಮೆರಿಕದಿಂದ ಉತ್ತರ ಕೊರಿಯಕ್ಕೆ ಪ್ರಯಾಣಿಸುವ ಹಾಗೂ ಆ ದೇಶದಲ್ಲಿ ಓಡಾಡುವ ಅಮೆರಿಕದ ನಾಗರಿಕರು ಬಂಧನಕ್ಕೆ ಒಳಗಾಗುವ ಹಾಗೂ ಸುದೀರ್ಘ ಕಾಲ ಸೆರೆಮನೆಯೊಳಗೆ ಇರಿಸಲ್ಪಡುವ ಅಪಾಯವನ್ನು ಎದುರಿಸುತ್ತಿದ್ದಾರೆ. ಅವರ ದೈಹಿಕ ಸುರಕ್ಷತೆಗೆ ಗಂಭೀರ ಅಪಾಯವಿದೆ’’ ಎಂದು ಅಮೆರಿಕ ಸರಕಾರದ ಫೆಡರಲ್ ರಿಜಿಸ್ಟರ್‌ನಲ್ಲಿ ಬುಧವಾರ ಪ್ರಕಟಗೊಂಡ ಹೇಳಿಕೆಯೊಂದು ತಿಳಿಸಿದೆ.