ಜೋಷ್ನಾ-ದೀಪಿಕಾ ಕ್ವಾರ್ಟರ್‌ಫೈನಲ್‌ಗೆ

Update: 2017-08-02 18:40 GMT

ಮ್ಯಾಂಚೆಸ್ಟರ್, ಆ.2: ಡಬ್ಲುಎಸ್‌ಎಫ್-ವಿಶ್ವ ಡಬಲ್ಸ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಲಿಷ್ಠ ಜೋಡಿ ಜೋಷ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಬುಧವಾರ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಜೋಶ್ನಾ ಹಾಗೂ ದೀಪಿಕಾ ವೇಲ್ಸ್‌ನ ಇವಾನ್ಸ್ ಹಾಗೂ ಸಫೆರಿ ಅವರನ್ನು 11-8, 11-7 ಅಂತರದಿಂದ ಮಣಿಸಿದರು. ಈ ಮೂಲಕ ಮೂರು ತಂಡವಿರುವ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ತಲುಪಿದರು. ಭಾರತದ ಮಿಶ್ರ ಡಬಲ್ಸ್ ಜೋಡಿ ಸೌರವ್ ಘೋಷಾಲ್ ಹಾಗೂ ದೀಪಿಕಾ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಮಲೇಷ್ಯಾದ ಮುಹಮ್ಮದ್ ಸಿಯಾಫಿಕ್ ಹಾಗೂ ರಾಚೆಲ್ ಅರ್ನಾರ್ಲ್ಡ್‌ರನ್ನು 11-7, 11-4 ಗೇಮ್‌ಗಳ ಅಂತರದಿಂದ ಮಣಿಸಿದರು.

 ಪುರುಷರ ಡಬಲ್ಸ್‌ನಲ್ಲಿ ಭಾರತದ ವಿಕ್ರಮ್ ಮಲ್ಹೋತ್ರಾ ಹಾಗೂ ಮಹೇಶ್ ಮಾನ್‌ಗಾಂವ್ಕರ್ ‘ಎ’ ಲೀಗ್‌ನ ಎರಡೂ ಪಂದ್ಯಗಳನ್ನು ಸೋತಿದ್ದಾರೆ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ಕ್ಲೈನ್ ಹಾಗೂ ಲೊಬನ್ ವಿರುದ್ಧ 1-11, 6-11 ರಿಂದ ಸೋತಿದ್ದ ಮಲ್ಹೋತ್ರಾ-ಮಾನ್‌ಗಾಂವ್ಕರ್ ಜೋಡಿ ಮತ್ತೊಂದು ಪಂದ್ಯದಲ್ಲಿ ಹಾಲೆಂಡ್‌ನ ಬೆನ್ನೆಟ್ ಹಾಗೂ ಸ್ಚೆವೀರ್ಟ್ಮನ್ ವಿರುದ್ಧ 6-11, 6-11 ಅಂತರದಿಂದ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News