×
Ad

ಹಕ್ಕು ಪತ್ರ ವಿತರಣಾ ಕಾರ್ಯಕ್ರಮ

Update: 2017-08-03 18:15 IST

ಬಂಟ್ವಾಳ,ಆ.03:ಕಳೆದ 25 ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಹಕ್ಕು ಪತ್ರ ಹೊಂದದ ಬಡವರಿಗೆ 94 ಸಿ ಹಾಗೂ 94 ಸಿಸಿ ಯೊಜನೆ ಮೂಲಕ ಹಕ್ಕುಪತ್ರ ನೀಡಿರುವುದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದ ಸಾಧನೆಯಾಗಿದೆ.ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಸರಕಾರವಾಗಿದೆ  ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿನ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರವನ್ನು ವಿತರಿಸಿ ಅವರು ಮಾತನಾಡಿದರು.

ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಹತೆ ಹೊಂದಿದ ಅರ್ಜಿದಾರ ಫಲಾನುಭವಿಗಳಿಗೆ ಎಲ್ಲರಿಗೂ ಹಕ್ಕು ಪತ್ರ ವಿತರಿಸುವ ಮೂಲಕ ಶೇಕಡ ನೂರು ಹಕ್ಕು ಪತ್ರ ವಿತರಿಸುವುದು ನಮ್ಮ ಗುರಿಯಾಗಿದೆ.ಅಂತೆಯೇ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೋಮಾಳ,ಅರಣ್ಯ ಗಡಿಭಾಗ,ಬಗರ್ ಹುಕುಂ,ಪರಂಬೋಕು ಜಾಗದಲ್ಲಿ ಮನೆ ನಿರ್ಮಿಸಿದವರಿಗೂ ಸಹಿತ ಹಕ್ಕು ಪತ್ರ ನೀಡಲಾಗಿದೆ ಎಂದು ಅವರು ಹೇಳಿದರು.

ಹಿಂದೆ 10-15 ಪಟ್ಟಾದಾರರಿದ್ದ ಗ್ರಾಮಗಳಲ್ಲಿ ಭೂಮಸೂದೆ ಕಾಯಿದೆ ಬಳಿಕ 2 ಸಾವಿರ ಪಟ್ಟಾದಾರರಿದ್ದಾರೆ.ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನಿವೇಶನ,ಮನೆ ನೀಡುವ ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರಕಾರವಾಗಿದೆ.ಇಂದಿರಾ ಗಾಂ„ ಅವರ 20 ಅಂಶಗಳ ಕಾರ್ಯಕ್ರಮದಿಂದ ಬಡವರು ಪಟ್ಟಾದಾರಿಕೆ ಹೊಂದಲು ಸಾಧ್ಯವಾಯಿತು,ಆದರೆ ಇಂದಿನ ಯುವ ಜನತೆ ಇದನ್ನು ಅರಿತುಕೊಳ್ಳಬೇಕಾಗಿದೆ ಎಂದ ಅವರು ಸಿದ್ಧರಾಮಯ್ಯ ಸರಕಾರ ಜನಪರ ಯೋಜನೆಗಳಿಂದ ಜನಮೆಚ್ಚುಗೆ ಗಳಿಸಿದೆ.ಅನ್ನಭಾಗ್ಯ,ಸಾಲ ಮನ್ನಾ,ವಿದ್ಯಾಸಿರಿ,ಅಂಗನವಾಡಿ ಮಕ್ಕಳಿಗೆ ಮೊಟ್ಟೆ,ಬಾಣಂತಿಯರಿಗೆ ಆರೈಕೆಗಾಗಿ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ,ಅನಿಲ ಭಾಗ್ಯ ಯೋಜನೆ ಮೊದಲಾದ ಯೋಜನೆಗಳಿಂದ ಬಡವರ ಸಂಕಷ್ಟ ದೂರಮಾಡಿದೆ ಎಂದು ಹೇಳಿದರು.

ಬಂಟ್ವಾಳ ತಾಲೂಕಿನಲ್ಲಿ 5 ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು ಈಗಾಗಲೇ ಸಂಗಬೆಟ್ಟು,ಕರೋಪಾಡಿ ಗಳಲ್ಲಿ ಕಾಮಗಾರಿ ಪೂರ್ತಿಗೊಂಡಿದೆ.30 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸರಪಾಡಿ ಯೋಜನೆಯಿಂದ ಶುದ್ಧೀಕರಿಸಿದ ಕುಡಿಯುವ ನೀರು ದೊರಕಲಿದೆ ಎಂದು ಹೇಳಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಾಕಿಯಾಗಿರುವ ಗ್ರಾಮೀಣ ರಸ್ತೆಗಳನ್ನು ಶೀಘ್ರ ಅಭಿವೃದ್ಧಿ ಪಡಿಸಲಾಗುವುದು.ವಾಮದಪದವು-ಮೂರ್ಜೆ ರಸ್ತೆಯಲ್ಲಿ ಉಳಿಕೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.ಕರಿಮಲೆ-ಅಣ್ಣಳಿಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಒಂದೆರಡು ತಿಂಗಳಲ್ಲಿ ಆರಂಭವಾಗುವುದು.ವಗ್ಗ-ಉಳಿ ರಸ್ತೆ,ನೆಲ್ಲಿಗುಡ್ಡೆ-ಕೊಂಬೇಲ್,ಕಟ್ಟದಪಡ್ಪು ರಸ್ತೆ,ಕಾಡಬೆಟ್ಟು-ಬಸ್ತಿಕೋಡಿ ರಸ್ತೆ,ಕಾರಿಂಜ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.ಬಿ.ಸಿ.ರೋಡ್‍ನಲ್ಲಿ ಮಿನಿ ವಿಧಾನಸೌಧ,ಬಸ್ ನಿಲ್ದಾಣ ನಿರ್ಮಿಸಲಾಗಿದ್ದು,ಅಂಬೇಡ್ಕರ್ ಭವನ,ಪಂಜೆ ಮಂಗೇಶ ರಾವ್ ಸ್ಮಾರಕ ಸಭಾಂಗಣ   ಮೊದಲಾದ ಜನಪರ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು.

ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಗ್ರಾಮದ ಅರ್ಜಿದಾರ ಬಡ ಜನತೆಗೆ ಹಕ್ಕು ಪತ್ರ ನೀಡುವ ಮೂಲಕ ಆಶಯ ಪೂರೈಸಿದ ಸಚಿವರಿಗೆ ಅಭಿನಂದನೆಗಳು,ಸಚಿವರು ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ನೀಡಬೇಕು ಎಂದರು.

ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್,ಉದ್ಯಮಿ ಲೋಕೇಶ್ ಆಚಾರ್ಯ,ಮಡಂತ್ಯಾರು ಗ್ರಾ.ಪಂ.ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ,ಕಾವಳಪಡೂರು ಗ್ರಾ.ಪಂ.ಸದಸ್ಯ ಚಂದ್ರಶೇಖರ ಕರ್ಣ,ಬಂಟ್ವಾಳ ಪುರಸಭಾ ಸದಸ್ಯ ಗಂಗಾಧರ್,ಪ್ರಭಾರ ಪಂ.ಅ.ಅ„ಕಾರಿ ಬಾಲಕೃಷ್ಣ ಪೂಜಾರಿ,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಮೋಹನ ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 108ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ 6 ಮಂದಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ ವಿತರಿಸಲಾಯಿತು.

ಕಂದಾಯ ನಿರೀಕ್ಷಕ ನವೀನ್ ಅವರು ಸ್ವಾಗತಿಸಿ,ಪ್ರಸ್ತಾವಿಸಿದರು.ಗ್ರಾಮ ಕರಣಿಕ ಕುಮಾರ್ ಟಿ.ಸಿ. ವಂದಿಸಿದರು.ರಾಜೇಂದ್ರ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News