×
Ad

ವೃಕ್ಷಾರೋಪಣ ಕಾರ್ಯಕ್ರಮ

Update: 2017-08-03 18:22 IST

ಪುತ್ತೂರು,ಆ.03: ಒಳಮೊಗ್ರು ಗ್ರಾಮ ಬಿಜೆಪಿ ಸಮಿತಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶಾತಾಬ್ದಿ ಅಂಗವಾಗಿ ವೃಕ್ಷಾರೋಪಣ ಕಾರ್ಯಕ್ರಮ ಪರ್ಪುಂಜದಲ್ಲಿ ನಡೆಸಲಾಯಿತು.

ಪಕ್ಷದ ಗ್ರಾಮ ಸಮಿತಿ ವಿಸ್ತಾರಕ ರಘುನಾಥ್ ಅತ್ತಾವರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ , ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ತಾಪಂ ಸದಸ್ಯ ಹರೀಶ್ ಬಿಜತ್ರೆ, ಸಂತೋಷ್‍ಕುಮಾರ್ ರೈ ಕೈಕಾರ, ಮಾಧವ ರೈ ಕುಂಬ್ರ, ಸುರೇಶ್ ಪರ್ಪುಂಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News