×
Ad

ಕೊರಿಂಗಿಲ: ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ

Update: 2017-08-03 18:25 IST

ಪುತ್ತೂರು,ಆ.3:   ಐಡಿಯಲ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಕೊರಿಂಗಿಲ ಬೆಟ್ಟಂಪಾಡಿ ಇದರ ನೇತೃತ್ವದಲ್ಲಿ ನೂತನ ಮಹಿಳಾ ಶರೀಅತ್ ಕಾಲೇಜನ್ನು ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಕೊರಿಂಗಿಲದಲ್ಲಿ ಬದಿಯಡ್ಕ ಪೆರಡಾಲ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ತಂಞಳ್ ಸೋಮವಾರ ಉದ್ಘಾಟಿಸಿದರು. 

ರೆಂಜ ಮಸೀದಿಯ ಹಮೀದ್ ಸಖಾಫಿ , ಪೇರಲ್ತಡ್ಕ ಮಸೀದಿಯ ಖತೀಬ್ ಅಬ್ಬಾಸ್ ಮದನಿ, ಕುಂಬ್ರ ಮರ್ಕಝಲ್ ಹುದಾ ಕಾಲೇಜಿನ ಜಲೀಲ್ ಸಖಾಫಿ, ಸಿವಿಲ್ ಇಂಜಿನಿಯರ್ ಅಲಿಕುಂಇ ಕೊರಿಂಗಿಲ, ಸಿವಿಲ್ ಇಂಜಿನಿಯರ್ ಅಬ್ದುಲ್ ರಹಿಮಾನ್ ಬೆಂಗಳೂರು, ಸಂಚಾಲಕ ಹಾಜಿ ಮಹಮ್ಮದ್ ಕುಕ್ಕುವಳ್ಳಿ ಗಡಿನಾಡ ಪತ್ರಿಕೆಯ ಸಂಪಾದಕ ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಕೊರಿಂಗಿಲ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಕುಂಇ, ರೆಂಜ ಫಾರೂಕ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ರೆಂಜ, ಮಹಮ್ಮದ್ ಕುಂಞಿ ಕಂಚಿಲ್ಕುಂಜ ಮತ್ತಿತರರು ಉಪಸ್ಥಿತರಿದ್ದರು.

ಕೊರಿಂಗಿಲ ಮಸೀದಿಯ ಖತೀಬ್ ಹಾಸಿಂ ಬಾಅಲವಿ ತಂಞಳ್ ಅಧ್ಯಕ್ಷತೆ ವಹಿಸಿದ್ದರು. ರಫೀಕ್ ಅಹಮದ್ ಕಂಚಿಲ್ಕುಂಜ ಸ್ವಾಗತಿಸಿ ವಂದಿಸಿದರು. ಅಜೀಜ್ ಬೆಂಗತ್ತಡ್ಕ, ಇಸುಬು ಕೂಟತ್ತಾನ, ಅಬೂಬಕ್ಕರ್ ಕೊರಿಂಗಿಲ, ಹಾಜಿ ಅಸೀಫ್ ತಂಬುತ್ತಡ್ಕ ಸಹಕರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News