ತುಂಬೆ : ಕಾಂಕ್ರಿಟೀಕರಣ ಕಾಮಗಾರಿಗೆ ಸಚಿವರಿಂದ ಶಿಲಾನ್ಯಾಸ
Update: 2017-08-03 18:54 IST
ಬಂಟ್ವಾಳ, ಆ. 8: ತುಂಬೆ ಗ್ರಾಮದ ಪಿಲಿಚಾಮುಂಡಿ ತಂಜೆಕರಿಯಾ ರಸ್ತೆಗೆ 5 ಲಕ್ಷ ರೂ. ವೆಚ್ಚದ ಕಾಂಕ್ರಿಟೀಕರಣದ ಕಾಮಗಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಬ್ಯಾಂಕ್ ನಾಮನಿರ್ದೆಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ ಶ್ರೀಶೈಲ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಿಸಾರ್ ಅಹ್ಮದ್, ತುಂಬೆ ವಲಯಾಧ್ಯಕ್ಷ ಮೋನಪ್ಪ ಮಜಿ, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಗುತ್ತಿಗೆದಾರ ದೇವದಾಸ್ ಪರ್ಲಕ್ಕೆ, ಪ್ರಮುಖರಾದ ಜಯರಾಮ ಸಾಮಾನಿ, ಅಬ್ದುಲ್ ರಶೀದ್, ಪ್ರವೀಣ್ ಕೊಟ್ಟಿಂಜ, ಮುಹಮ್ಮದ್ ಇಮ್ತಿಯಾಜ್, ಹಬೀಬ್ ಅಲ್ಸಾಂಡಿಯಾ, ಕಮಲ್, ಲೋಕನಾಥ ತುಂಬೆ, ಪ್ರಭಾಕರ್, ಆರ್.ಎಸ್.ಜಯ, ಮಹಾಬಲ, ಮಾಧವ, ಇಬ್ರಾಹೀಂ ರಿಯಾಝ್, ಗಣೇಶ್ ಸಾಲ್ಯಾನ್, ಜಗದೀಶ್ ಗಟ್ಟಿ, ಇಬ್ರಾಹಿಂ ವಳವೂರು, ಹರೀಶ್ ಬೊಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು.