ಘನ, ದ್ರವ ಸಂಪನ್ಮೂಲ ನಿರ್ವಹಣೆ; ಆಯ್ಕೆ ಪ್ರಕ್ರಿಯೆ

Update: 2017-08-03 14:45 GMT

ಉಡುಪಿ, ಆ.3: ಜಿಲ್ಲೆಯ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ಕಾರ್ಯದಲ್ಲಿ ಸ್ವಸಹಾಯ ಗುಂಪುಗಳ ಜೊತೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಗ್ರಾಮ ಮಟ್ಟದ ನಿರುದ್ಯೋಗಿ ಪುರುಷ/ಮಹಿಳೆಯರ ಆಯ್ಕೆ ಪ್ರಕ್ರಿಯೆ ಆ.10ರಂದು ಬೆಳಗ್ಗೆ 9:30ರಿಂದ 11:30ರವರೆಗೆ ಕಾರ್ಕಳ ತಾಪಂ ಸಭಾಂಗಣದಲ್ಲಿ, ಅಪರಾಹ್ನ 12:30ರಿಂದ 2:30 ರವಗೆ ಕುಂದಾಪುರ ತಾಪಂ ಸಭಾಂಗಣ ಹಾಗೂ ಅಪರಾಹ್ನ 3:00ರಿಂದ 5:30ರವರೆಗೆ ಉಡುಪಿ ತಾಪಂ ಸಭಾಂಗಣದಲ್ಲಿ ನಡೆಯಲಿದೆ.

 ಆಸಕ್ತರು ತಮ್ಮ ಇತ್ತೀಚಿನ ಮೂರು ಭಾವಚಿತ್ರ ಹಾಗೂ ಗುರುತಿನ ಚೀಟಿಯ ಪ್ರತಿಯೊಂದಿಗೆ ಹಾಜರಾಗಬಹುದು. 10ನೇ ತರಗತಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವವರು ಸಹ ಇದರಲ್ಲಿ ಭಾಗವಹಿಸಬಹುದಾಗಿದ್ದು, ನಿಗದಿಗೊಳಿಸಿದ ಸಮಯಕ್ಕೆ 30 ನಿಮಿಷ ಮುಂಚಿತವಾಗಿ ಹಾಜರಿರುವಂತೆ ಜಿಪಂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News