ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ

Update: 2017-08-03 14:45 GMT

ಉಡುಪಿ, ಆ.3: ಹೊಸ ಕಾನೂನು ಪದವೀಧರರಿಗೆ 2017-18ನೇ ಸಾಲಿಗೆ ಪ್ರೋತ್ಸಾಹಧನವನ್ನು ವಿತರಿಸುವ ಕುರಿತು ಅರ್ಹ ಅ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆ.26ರೊಳಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು/ಅಧ್ಯಕ್ಷರು, ಜಿಲ್ಲಾ ಆಯ್ಕೆ ಸಮಿತಿ, ನವ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ಯೋಜನೆ, ಜಿಲ್ಲಾ ನ್ಯಾಯಾಧೀಶರ ಕಚೇರಿ ಉಡುಪಿ ಇಲ್ಲಿಗೆ ಸಲ್ಲಿಸತಕ್ಕದ್ದು.

  ಅರ್ಜಿ ಸಲ್ಲಿಸಬಯಸುವ ಅ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲ ಪರಿಷತ್ತಿ ನಲ್ಲಿ 2016ರ ಜೂ.1ರಿಂದ 2017ರ ಮೇ 31ರ ನಡುವಿನ ಅವಧಿಯಲ್ಲಿ ವಕೀಲಿ ವೃತ್ತಿಗೆ ಹೆಸರು ನೊಂದಾಯಿಸಿರಬೇಕು. ಯೋಜನೆಯ ಫಲಾನುಭವಿ ಗಳಿಗಾಗಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳ ಬಯಸುವ ಹೊಸದಾಗಿ ವಕೀಲ ವೃತ್ತಿಯಲ್ಲಿ ತೊಡಗುವ ಕಾನೂನು ಪದವೀಧರರು ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ನೊಂದಾಯಿಸಿದ ನಂತರ ಸ್ಥಳೀಯ ವಕೀಲರ ಸಂದ ಅಧ್ಯಕ್ಷರಿಂದ ಪ್ರಮಾಣ ಪತ್ರ ಪಡೆದು ಆಯ್ಕೆ ಸಮಿತಿಯ ಸಂಬಂಧಿತ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರ ಮುಖಾಂತರ ಮತ್ತು ಜಿಲ್ಲಾ ಹಂತದಲ್ಲಿ ನೇರವಾಗಿ ಸಮಿತಿಯ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News