ಗಾಂಜಾ ವಶ; ವ್ಯಕ್ತಿಯ ಬಂಧನ
ಮಣಿಪಾಲ, ಆ.3: ಖಚಿತ ವರ್ತಮಾನದ ಮೇಲೆ ಪೊಲೀಸ್ ನಿರೀಕ್ಷಕ ರತ್ನಕುಮಾರ್ ಜಿ. ನೇತೃತ್ವದಲ್ಲಿ ಉಡುಪಿ ಸೆನ್ ಅಪರಾಧ ಪೊಲೀಸರು ಮಣಿಪಾಲದ ಗ್ರೀನ್‌ವ್ಯಾಲಿ ಅಪಾರ್ಟ್‌ಮೆಂಟ್ಸ್ ಸಮೀಪ ಸಗ್ರಿ ಶಾಲಾ ರಸ್ತೆಯ ಬಳಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಆತನಿಂದ 3ಕಿ.148ಗ್ರಾಂ ಗಾಂಜಾವಿರುವ ಬ್ಯಾಗ್, 12 ಪೇಪರ್ ರೋಲ್‌ಗಳಲ್ಲಿದ್ದ 398 ಗ್ರಾಂ ಗಾಂಜಾ, ಮಾಪನ, ಮೊಬೈಲ್, ಗಾಂಜಾ ಮಾರಾಟ ಮಾಡಿ ಪಡೆದ 4,400ರೂ.ನಗದು ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮೂಲತ: ಬಿಹಾರ್ ರಾಜ್ಯದ ಪಾಟ್ನಾ ಜಿಲ್ಲೆಯ ಕನ್ಕಾರ್‌ಬಾಗ್‌ನವನಾಗಿದ್ದು, ಮಣಿಪಾಲದಲ್ಲಿ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಪೆರಂಪಳ್ಳಿ ರಸ್ತೆಯ ಗ್ರೇಸ್ ಕಾಟೇಜ್‌ನಲ್ಲಿ ವಾಸವಾಗಿರುವ ರಾಹುಲ್ ರಂಜನ್ (26) ಎಂದು ಗುರುತಿಸಲಾಗಿದೆ. ಆತ ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬ್ಯಾಗಿನಲ್ಲಿ ಗಾಂಜಾ ತಂದಿರುವುದನ್ನು ಒಪ್ಪಿಕೊಂಡಿದ್ದಾನೆ.
ರಾಹುಲ್ ರಂಜನ್‌ನನ್ನು ಬಂಧಿಸಿರುವ ಪೊಲೀಸರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.