ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆಗೆ ಬೀಳ್ಕೊಡುಗೆ

Update: 2017-08-04 12:45 GMT

ಬೆಳ್ಮಣ್, ಆ.4: ಸುಮಾರು 39ವರ್ಷಗಳ ಶಿಕ್ಷಕ ವೃತ್ತಿ ಜೀವನದೊಂದಿಗೆ ವಯೋ ನಿವೃತ್ತಿ ಹೊಂದಿದ ಬಿ.ಪುಂಡಲೀಕ ಮರಾಠೆಯವರಿಗೆ ಬೆಳ್ಮಣ್ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿ, ಪೋಷಕರು ಹಾಗೂ ಬೆಳ್ಮಣ್ ಸಾರ್ವಜನಿಕ ಸಮಾಜ ಸೇವಾ ಸಂಘಟನೆಗಳ ವತಿಯಿಂದ ಇತ್ತೀಚೆಗೆ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸ ಲಾಗಿತ್ತು.

ಈ ಸಂದರ್ಭದಲ್ಲಿ ಪುಂಡಲೀಕ ಮರಾಠೆ ಮತ್ತು ಉಷಾ ಮರಾಠೆ ದಂಪತಿ ಯನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಹಾಗೂ ಬೆಳ್ಮಣ್ ಸಂತ ಜೋಸೆಪ್ ಧರ್ಮಕೇಂದ್ರದ ಹಿರಿಯ ಧರ್ಮಗುರು ರೆ.ಫಾ. ಎಡ್ವಿನ್ ಡಿಸೋಜ ವಹಿಸಿದ್ದರು.

ಸಂಸ್ಥೆಯ ಮಾಜಿ ಸಂಚಾಲಕ ರೆ.ಫಾ.ಲಾರೆನ್ಸ್ ಬಿ.ಡಿಸೋಜ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕ್ಸೇವಿಯರ್ ಡಿಮೆಲ್ಲೊ, ಮಂಗಳೂರು ಕೆಥೊಲಿಕ ಶಿಕ್ಷಣ ಮಂಡಳಿಯ ಮಾಜಿ ಕಾರ್ಯದರ್ಶಿ ಫಾ.ವಿಲ್ಸನ್ ಡಿಸೋಜ, ಮುಖಾಮಾರ್, ಚರ್ಚ್‌ನ ಧರ್ಮಗುರು ರೆ.ಫಾ.ಲೂವಿಸ್ ಡೇಸಾ, ಶಾಲಾ ಮಾಜಿ ಸಂಚಾಲಕ ಫಾ.ಲಾರೆ್ಸ್ ರೊಡ್ರಿಗಸ್ ಶುಭ ಹಾರೈಸಿದರು.

ಚರ್ಚ್ ಪಾಲನಾ ಮಂಡಳಿ ಮಾಜಿ ಅಧ್ಯಕ್ಷ ಗ್ರೆಗರಿ ಮಿನೇಜಸ್, ಸಿಲ್ವೆಸ್ಟರ್ ಡಿಮೆಲ್ಲೊ, ಸುರತ್ಕಲ್ ಎನ್‌ಐಟಿಕೆ ನಿವೃತ್ತ ಉಪನ್ಯಾಸಕ ಪ್ರೊ.ರಾಬರ್ಟ್ ಡಿಸೋಜ, ಬೆಳ್ಮಣ್ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ರಾವ್, ತಾಪಂ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಬೆಳ್ಮಣ್ ರೋಟರಿ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಲಯನ್ಸ್ ಅಧ್ಯಕ್ಷ ಪ್ರಕಾಶ್‌ಚಂದ್ರ, ಜೆಸಿಐ ಅಧ್ಯಕ್ಷ ರವಿರಾಜ್ ಶೆಟ್ಟಿ, ನಿಕಟಪೂರ್ವ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೋನಿಕಾ ಮೊಂತೇರೊ, ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಉಷಾ ಸ್ಟೆಲ್ಲಾ, ಗ್ರಾಪಂ ಸದಸ್ಯ ಪ್ರಬಾಕರ ಶೆಟ್ಟಿ ಉಪಸ್ಥಿತರಿದ್ದರು.

ಮರಾಠೆ ತನ್ನ ಶಿಕ್ಷಣ ಗುರು ಲೀಲಾವತಿ ಲಕ್ಷ್ಮೀನಾರಾಯಣ ಪಾಟ್ಕರ್, ಆಧ್ಯಾತ್ಮಗುರು ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್ ಅವರನ್ನು ಗೌರವಿಸಿ ಗುರುವಂದನೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕಿ ಲೂಸಿ ಪಿರೇರಾ ಸ್ವಾಗತಿಸಿ ದರು. ಶಿಕ್ಷಕಿ ಲಿಲ್ಲಿ ಡಿಸೋಜ ವಂದಿಸಿದರು. ವಿನ್ಸೆಂಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News