ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ
Update: 2017-08-04 18:35 IST
ಕಾಸರಗೋಡು, ಆ. 4: ಕಯ್ಯಾರು ಮಂಡೆಕಾಪಿನ ವ್ಯಾಪಾರಿ ರಾಮಕೃಷ್ಣ ಮೂಲ್ಯ (47) ಎಂಬವರನ್ನು ಅಂಗಡಿ ನುಗ್ಗಿ ಕೊಲೆಗೈದ ಪ್ರಕರಣದ ಬಗ್ಗೆ ತನಿಖಾ ತಂಡ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದಲ್ಲಿ ಎಡನೀರು ಚೂರಿಮೂಲೆಯ ಬಿ.ಎಂ. ಉಮರ್ ಫಾರೂಕ್ (36), ಪೊವ್ವಲ್ ನ ನೌಶಾದ್ ಶೇಖ್ ( 33), ಬೋವಿಕ್ಕಾನ ಎಂಟನೇ ಮೈಲ್ ನ ಅಬ್ದುಲ್ ಆರಿಫ್ (33) ಮತ್ತು ಚೆಂಗಳ ರಹಮತ್ ನಗರದ ಕೆ .ಅಶ್ರಫ್ (23) ಆರೋಪಿಗಳು ಎಂದು ಗುರುತಿಸಲಾಗಿದೆ. ಮೇ 4ರಂದು ಮಧ್ಯಾಹ್ನ ರಾಮಕೃಷ್ಣ ರನ್ನು ಅಂಗಡಿಗೆ ನುಗ್ಗಿದ ತಂಡವು ಕೊಚ್ಚಿ ಕೊಲೆ ಮಾಡಿತ್ತು. 800 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.