ಕೊಲೆ ಯತ್ನ ಪ್ರಕರಣ: ಆರೋಪಿಗೆ ಜಾಮೀನು
Update: 2017-08-04 20:00 IST
ಪುತ್ತೂರು, ಆ. 4: ಕಳೆದ ವರ್ಷ ಕಡಬ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ಕಡಬ ಸಮೀಪದ ಮರ್ದಾಳ ನಿವಾಸಿ ಕರೀಂ ಜಾಮೀನು ಪಡೆದುಕೊಂಡ ಆರೋಪಿ. 2016ರ ಜು. 24ರಂದು ತೀರ್ಥೆಶ್ ಎಂಬವರು ಬೈಕ್‌ನಲ್ಲಿ ತನ್ನ ಮನಗೆ ಹೋಗುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಆಗಮಿಸಿ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿತ್ತು.
ಈ ಕೃತ್ಯವನ್ನು ನಡೆಸಲು ಸ್ಥಳೀಯರಾದ ರಝಾಕ್ ಮತ್ತು ಕರೀಂ ಕಾರಣವೆಂದು ಈ ಬಗ್ಗೆ ಗುಮಾನಿ ಇರುವುದಾಗಿ ಆರೋಪಿಸಿ ತೀರ್ಥೆಶ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕರೀಂ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ಆರೋಪಿಯ ಪರವಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು.