ಸಮಾಜಮುಖಿ ಕಾರ್ಯದಿಂದ ಸ್ವಂತಿಕೆ ವೃದ್ಧಿ -ಡಾ. ಪೀಟರ್ ವಿಲ್ಸನ್ ಪ್ರಭಾಕರ್

Update: 2017-08-04 14:34 GMT

ಪುತ್ತೂರು, ಆ. 4: ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಈ ಏಕತೆನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಪರಿಶ್ರಮ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಿಕೆ ನಮ್ಮಲ್ಲಿ ಸ್ವಂತಿಕೆಯನ್ನು ಬೆಳೆಸುವುದರ ಜತೆಗೆ ನಮ್ಮ ವೈಯಕ್ತಿಕ ಬೆಳವಣಿಗೆಗೆ ಕಾರಣೀಭೂತವಾಗುತ್ತದೆ.. ಸಂಘಟನೆಗಳಲ್ಲಿನ ತೊಡಗಿಕೊಳ್ಳುವಿಕೆ ನಮ್ಮಲ್ಲಿ ರಾಷ್ಟ್ರ ಚಿಂತನೆಯನ್ನು ಹುಟ್ಟುಹಾಕಿ, ಐಕ್ಯತೆಯನ್ನು ಸಾಧಿಸುವಲ್ಲಿ ಸಹಾಯ ಮಾಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು

ಅವರು ಪುತ್ತೂರು ವಿವೇಕಾನಂದ ಕಾಲೇಜಿನ ವಿವೇಕಾನಂದ ರೋವರ್ ಕ್ರ್ಯೂ ಹಾಗೂ ನಿವೇದಿತಾ ರೇಂಜರ್ ಟೀಮ್ ವತಿಯಿಂದ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪನ್ಯಾಸ ನೀಡಿದ ರೇಂಜರ್ಸ್‌ ಹಾಗೂ ರೋವರ್ಸ್‌ನ ಜಿಲ್ಲಾ ತರಬೇತಿ ಆಯುಕ್ತ ಪ್ರತಿಮ್ ಕುಮಾರ್ ಅವರು ನಾವೆಷ್ಟು ಒಳ್ಳೆಯವರಾಗಿದ್ದರೂ ಆ ಒಳ್ಳೆಯತನವನ್ನು ಕೆಡವುವ ಪ್ರಯತ್ನ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ಅದನನ್ನು ಮಿರಿ ನಾವು ಬೆಳೆಯಬೇಕು. ಸೇವೆ ಎಂಬುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವಾಗಬೇಕು. ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ನಾವು ಬೆಳೆಯಬೇಕು ಎಂದರು.

ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಅವರು ಮಾತನಾಡಿ, ಯಾವುದೇ ಸಂಘಟನೆಯ ಸದಸ್ಯನಾದವನಿಗೆ ಮೊದಲಾಗಿ ತಾಳ್ಮೆಯಿರಬೇಕು. ನಂಬಿಕೆಗೆ ಅರ್ಹನಾಗಿರಬೇಕು. ಆತ ವಿಧೇಯತೆಯೊಂದಿಗೆ ಸ್ನೇಹಪರ ಜೀವಿಯಾಗಬೇಕು. ತನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ, ಪರಿಸರಕ್ಕೆ, ದೇಶಕ್ಕೆ ಒಳತಿನ ಕಾರ್ಯಗಳನ್ನು ಮಾಡುವ ಕಾಲಜಿ ಇರಬೇಕು ಎಂದರು.

ಉಪನ್ಯಾಸಕಿಯಾದ ರೇಂಜರ್ ಹಾಗೂ ರೋವರ್ ಸಂಚಾಲಕಿ ದಿವ್ಯಾ ಇದ್ದರು. ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ, ರೇಂಜರ್ ಹಾಗೂ ರೋವರ್ ಸಂಚಾಲಕ ಈಶ್ವರ್ ಪ್ರಸಾದ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ, ಸಂಚಾಲಕಿ ದೀಪಿಕಾ ವಂದಿಸಿದರು. ವಿದ್ಯಾರ್ಥಿನಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News