ಯಶಸ್ವಿನಿ ನೊಂದಣಿ ವಿಸ್ತರಣೆ
Update: 2017-08-04 20:10 IST
ಉಡುಪಿ, ಆ.4: ಯಶಸ್ವಿನಿ ಗ್ರಾಮೀಣ ಹಾಗೂ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೊಂದಣಿಗೆ ಅವಕಾಶವನ್ನು ಆ.31ರ ವರೆಗೆ ಮುಂದುವರಿಸಲಾಗಿದೆ. ಆದ್ದರಿಂದ ಇದುವರೆಗೆ ಯಶಸ್ವಿನಿ ಯೋಜನೆಯಡಿ ನೊಂದಣಿ ಮಾಡದ ಸದಸ್ಯರು ಈ ಅವಕಾಶವನ್ನು ಉಪಯೋಗಿಸಿಕೊಂಡು ಯೋಜನೆಯ ಸೌಲ್ಯವನ್ನು ಪಡೆಯುವಂತೆ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ ನಾಯಕ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.