×
Ad

ನಾಳೆ ಉಪರಾಷ್ಟ್ರಪತಿ ಚುನಾವಣೆ

Update: 2017-08-04 20:25 IST

ಹೊಸದಿಲ್ಲಿ, ಆ. 4: ಭಾರತದ ಮುಂದಿನ ಉಪರಾಷ್ಟ್ರಪತಿಗೆ ಚುನಾವಣೆ ಆ. 5ರಂದು ನಡೆಯಲಿದೆ. ಶನಿವಾರ ಸಂಜೆ ಮುಂದಿನ ಉಪರಾಷ್ಟ್ರಪತಿ ಯಾರು ಎಂದು ತಿಳಿಯಲಿದೆ.

ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಚುನಾವಣೆಯಲ್ಲಿ ವಿಜಯಿಯಾಗುವ ಎಲ್ಲ ಸಾಧ್ಯತೆ ಇದೆ. ಅವರು 488 ಮತ ಪಡೆಯುವ ನಿರೀಕ್ಷೆ ಇದೆ. ಆದಾಗ್ಯೂ, ಹೆಚ್ಚಿನ ಪಕ್ಷಗಳು ಅವರನ್ನು ಬೆಂಬಲಿಸಲು ಮಂದೆ ಬಂದಿರುವುದರಿಂದ ಇಲೆಕ್ಟ್ರಾಲ್ ಕಾಲೇಜಿನ 787 ಮತಗಳಲ್ಲಿ 587 ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ವಿರೋಧ ಪಕ್ಷ ವೆಂಕಯ್ಯ ನಾಯ್ಡು ವಿರುದ್ಧ ಗೋಪಾಲಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸಿದೆ. ಗೋಪಾಲಕೃಷ್ಣ ಗಾಂಧಿಗೆ ಬಿಜೆಡಿ ಹಾಗೂ ಜೆಡಿಯು ಬೆಂಬಲ ವ್ಯಕ್ತಪಡಿಸಿದೆ. ಚುನಾವಣೆ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ಚುನಾವಣೆ ಆಯೋಗ ನೀಡಿದ ಮತಪತ್ರದಲ್ಲಿ ತಮ್ಮ ಆಯ್ಕೆಯನ್ನು ಗುರುತು ಮಾಡಲು ಸಂಸತ್ ಸದಸ್ಯರು ವಿಶೇಷ ಪೆನ್ ಬಳಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News