ಕಾವ್ಯಾ ಪೂಜಾರಿ ಮನೆಗೆ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಭೇಟಿ
Update: 2017-08-04 20:49 IST
ಮಂಗಳೂರು, ಆ. 4: ನಿಗೂಢವಾಗಿ ಮೃತಪಟ್ಟ ಕಾವ್ಯಾ ಪೂಜಾರಿ ಮನೆಗೆ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ನೇತ್ರತ್ವದ ನಿಯೋಗ ಭೇಟಿ ನೀಡಿ ಸಾಂತ್ವನ ನೀಡಲಾಯಿತು.
ಕಾವ್ಯಾಳಿಗೆ ನ್ಯಾಯ ಸಿಗುವವರೆಗೆ ಕುಟುಂಬದೊಂದಿಗೆ ಕಾವ್ಯಾ ಪರ ಹೋರಾಟಕ್ಕೆ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು. ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಯ ಹಿಂದಿರುವ ನಿಗೂಢತೆಯನ್ನು ಬಯಲಿಗೆಳೆಯಬೇಕು ಮತ್ತು ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದರು. ನಿಯೋಗದಲ್ಲಿ ಹಮೀದ್ ಕುದ್ರೋಳಿ, ಅಡ್ವಕೇಟ್ ಹನೀಫ್ , ಸಿ.ಎಂ. ಮುಸ್ತಫಾ, ಅದ್ದು ಕೃಷ್ಣಾಪುರ, ಹಾರಿಸ್ ಬೈಕಂಪಾಡಿ, ಶಾಫಿ ಬಬ್ಬುಕಟ್ಟೇ, ನಾಸಿರ್ ಬಜ್ಪೆ, ಸಿರಾಜ್ ಬಜ್ಪೆ ಉಪಸ್ಥಿತರಿದ್ದರು.