×
Ad

ಎಸ್.ಆರ್. ಸ್ಟೀಲ್ ಕ್ರಾಫ್ಟ್‌ ಶುಭಾರಂಭ

Update: 2017-08-04 21:02 IST

ಬಿ.ಸಿ.ರೋಡು, ಆ. 4: ಮಿತ್ತಬೈಲು ಎನ್.ಆರ್.ಕಾಂಪ್ಲೆಕ್ಸ್‌ನಲ್ಲಿ ಎಸ್.ಆರ್. ಸ್ಟೀಲ್ ಕ್ರಾಫ್ಟ್‌ನ ಕಚೇರಿ ಶುಕ್ರವಾರ ಶುಭಾರಂಭಗೊಂಡಿತು.

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಂ. ಹೈದರ್ ನಝೀರ್ ಮಾತನಾಡಿ, ನಮ್ಮಲ್ಲಿ ಎಲ್ಲಾ ತರದ ಸ್ಟೀಲ್ ಪೈಪ್‌ಗಳು ಮಾರಾಟಕ್ಕಿವೆ. ಮನೆ ಹಾಗೂ ಕಟ್ಟಡಗಳಿಗೆ ಅತ್ಯಾಧುನಿಕ ಶೈಲಿಯಲ್ಲಿ ಸ್ಟೀಲ್ ರೈಲಿಂಗ್ಸ್‌ಗಳನ್ನು ಮಾಡಿಕೊಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಸುಲೈಮಾನ್ ಹಾಜಿ ಸಾಲ್ಮರ, ಎಸ್.ಎಂ. ಸಲೀಂ ಹಾಜಿ, ಹಸನಬ್ಬ ಮಾಣೂರು, ರಫೀಕ್ ಪಡ್ವಾಯೂರ್, ಕಬೀರ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News