×
Ad

ನಿಟ್ಟೆಯಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ!

Update: 2017-08-04 21:08 IST

ಕಾರ್ಕಳ, ಆ. 4: ಬಾವಿಗೆ ಬಿದ್ದ ಚಿರತೆಯನ್ನು ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಅರಣ್ಯಾಧಿಕಾರಿಗಳು ಬೋನ್‌ನಲ್ಲಿ ಬಂಧಿಸಿ, ರಕ್ಷಿಸಿದ ಘಟನೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದೆ.

ಲೆಮಿನಾ ಕ್ರಾಸ್ ಬಳಿಯ ನೊರೋನ್ಹ ಕಾಂಪೌಂಡ್‌ನ ಜುಲಿಯಾನಾ ನೊರೊನ್ಹ ಎಂಬವರ ಬಾವಿಗೆ ಈ ಚಿರತೆ ಬಿದ್ದಿತ್ತು. ಕಾರ್ಕಳ ವಲಯ ಅರಣ್ಯಾಧಿಕಾರಿ ಸಿ.ಡಿ.ದಿನೇಶ್, ಬೆಳ್ಮಣ್ಣು ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಕಾರ್ಕಳ ವಲಯದ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ, ರಾಜಶೇಖರ, ಅರಣ್ಯ ರಕ್ಷಕರಾದ ಗಣೇಶ್ ದೇವಾಡಿಗ, ಆನಂದ್, ಕಷ್ಣಪ್ಪ, ಅರಣ್ಯ ವೀಕ್ಷಕ ಶ್ರೀಧರ ಪೂಜಾರಿ,ಬಾಬು, ಪ್ರಕಾಶ ಯಾನೆ ಬಾಬು, ಫಕೀರಪ್ಪ, ವಾಹನ ಚಾಲಕ ಅನ್ವರ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News