ಉಡುಪಿ ನೂತನ ಎಸ್ಪಿಯಾಗಿ ಸಂಜೀವ್ ಪಾಟೀಲ್
ಉಡುಪಿ, ಆ.4: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಂಜೀವ ಎಂ.ಪಾಟೀಲ್‌ರನ್ನು ನಿಯುಕ್ತಿಗೊಳಿಸಲಾಗಿದೆ. ಕಳೆದೊಂದು ವರ್ಷ ದಲ್ಲಿ ಉಡುಪಿಯ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಕೆ.ಟಿ. ಬಾಲಕೃಷ್ಣರನ್ನು ಗೃಹರಕ್ಷಕ ದಳದ ಎಸ್ಪಿ ಹಾಗೂ ಡೆಪ್ಯುಟಿ ಕಮಾಂಡೆಂಟ್ ಜನರಲ್ ಆಗಿ ಬೆಂಗಳೂರಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಸಂಜೀವ ಎಂ.ಪಾಟೀಲ್ ಅವರು ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)ಯ ಎಸ್ಪಿಯಾಗಿ ಕಾರ್ಯನಿರ್ವಹಿಸುತಿದ್ದರು. ಕಳೆದ ಮೇ 6ರಂದು ಮಂಗಳೂರಿನ ಕಮಿಷನರೇಟ್‌ನಲ್ಲಿ ಡಿಸಿಪಿ (ಅಪರಾಧ ಮತ್ತು ಟ್ರಾಫಿಕ್) ಹುದ್ದೆಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಅವರು ಇದೀಗ ಮೂರೇ ತಿಂಗಳಿಗೆ ಮತ್ತೆ ಕರಾವಳಿಗೆ ಮರಳುತಿದ್ದಾರೆ.
ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಸಂಜೀವ ಎಂ.ಪಾಟೀಲ್ ಅವರು ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ) ಯ ಎಸ್ಪಿಯಾಗಿ ಕಾರ್ಯ ನಿರ್ವಹಿಸುತಿದ್ದರು.
ಕಳೆದ ಮೇ6ರಂದು ಮಂಗಳೂರಿನ ಕಮಿಷನರೇಟ್‌ನಲ್ಲಿ ಡಿಸಿಪಿ (ಅಪರಾ ಮತ್ತು ಟ್ರಾಫಿಕ್) ಹುದ್ದೆಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಅವರು ಇದೀಗ ಮೂರೇ ತಿಂಗಳಿಗೆ ಮತ್ತೆ ಕರಾವಳಿಗೆ ಮರಳುತಿದ್ದಾರೆ. ಇದೇ ಜು. 21ರಂದು ಕರ್ನಾಟಕದಿಂದ ಐಪಿಎಸ್‌ಗೆ ಭಡ್ತಿಹೊಂದಿದ್ದ 23 ಮಂದಿ ಕೆಎಸ್‌ಪಿಎಸ್ ಅಧಿಕಾರಿಗಳಲ್ಲಿ ಡಾ. ಸಂಜೀವ್ ಎಂ.ಪಾಟೀಲ್ ಸಹ ಒಬ್ಬರು. ದಂತ ವೈದ್ಯರಾಗಿರುವ (ಬಿಡಿಎಸ್ ಪದವಿ) ಇವರು ಪೊಲೀಸ್ ಇಲಾಖೆಯಲ್ಲಿ ತೋರಿದ ಅತ್ಯುತ್ತಮ ಸೇವೆಗಾಗಿ 2013ರಲ್ಲಿ ಮುಖ್ಯಮಂತ್ರಿ ಚಿನ್ನ ಪದಕವನ್ನು ಸಹ ಪಡೆದಿದ್ದಾರೆ.